ಚಿತ್ರಕಲಾವಿದ ಎ. ಎಸ್. ಕುಮಾರ್ ಗೆ ಮ್ಯಾದಾರ ದತ್ತಿ ಪ್ರಶಸ್ತಿ

ರಾಯಚೂರು ಏ ೦೭
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮ್ಯಾದಾರ ಲಲಿತ ಕಲಾ ಪ್ರತಿಷ್ಠಾನ ವತಿಯಿಂದ ೨೦೨೨- ೨೩ನೇ ಸಾಲಿನ ದಿವಂಗತ ಹನುಮಂತಪ್ಪ ಸಂಜೀವಪ್ಪ ಮ್ಯಾದಾರ ದತ್ತಿ ಪ್ರಶಸ್ತಿಯನ್ನು ಈ ಬಾರಿ ಜಿಲ್ಲೆಯ ಖ್ಯಾತ ಚಿತ್ರಕಲಾವಿದರಾದ ಎ. ಎಸ್. ಕುಮಾರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇಂದು ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಪರಿಷತ್ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ, ಮೈಲಾರ್ ಲಲಿತ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಚ್ ಎಚ್ ಮ್ಯಾದಾರ, ಕಸಾಪ ಗೌರವ ಕಾರ್ಯದರ್ಶಿ ರಾವುತರಾವ್ ಬರೂರ, ಲಲಿತ ಕಲಾ ಪ್ರತಿಷ್ಠಾನ ಕಾರ್ಯದರ್ಶಿ ರಾಮಣ್ಣ ಮ್ಯಾದಾರ್, ಗುರು ಕಲಾಮಂದಿರ ಕಲಾ ಮಂದಿರ ಪ್ರಾಂಶುಪಾಲ ಚಂದ್ರಶೇಖರ್, ಯುವ ಕಲಾವಿದ ಈರಣ್ಣ ಬೆಂಗಾಲಿ ಇದ್ದರು.