ಚಿತ್ತ” ಬದುಕಿನ ಸೂತ್ರದಾರ.

ನಮ್ಮ ಚಿಂತೆಯೇ ನಮಗೆ ಫಲವನ್ನ ನೀಡುತ್ತದೆ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ  ನಾವು ಯಾವ ರೀತಿಯ ಚಿತ್ತದಲ್ಲಿ ತೊಡಗಿದ್ದೇವೆ ಎಂಬುದರ  ಮೇಲೆ ನಮ್ಮ ನಿರೀಕ್ಷೆಗಳು ಸಫಲಗೊಳ್ಳುತ್ತವೆ. ಜ್ಞಾನ ಮತ್ತು ಬುದ್ಧಿವಂತಿಕೆಯ ಮೇಲೆ ನಮ್ಮ ಚಿತ್ತವನ್ನು ಹೂಡಿಕೆ ಮಾಡಿದರೆ  ಭವಿಷ್ಯದಲ್ಲಿ ಸುಂದರವಾದ ಜೀವನ ಶೈಲಿಯನ್ನ ಅಳವಡಿಸಿಕೊಳ್ಳಬಹುದು. ಜ್ಞಾನವೆಂದರೆ ಕೇವಲ ಪುಸ್ತಕದಲ್ಲಿರುವ ನಾಲ್ಕು ಸಾಲುಗಳು ಮಾತ್ರ ಅಲ್ಲ, ನಾಲ್ಕು ಗೋಡೆಗಳಲ್ಲಿ ಕಲಿಯುವ  ಅಂಕಗಳ ಪ್ರಶ್ನೆ ಉತ್ತರಗಳಲ್ಲ. ಜ್ಞಾನವೆಂದರೆ ತನಗಿಷ್ಟವಿರುವ ಕೆಲಸ ಕಾರ್ಯಗಳಲ್ಲಿ ನಿಪುಣತೆಯನ್ನು ಪಡೆಯುವುದು. ನಿಪುಣತೆಯನ್ನ ಪಡೆಯಬೇಕಾದರೆೆ  ಮಾಡುವ ಕೆಲಸದಲ್ಲಿ ಚಿತ್ತವನ್ನ ಹೂಡಿಕೆ ಮಾಡಬೇಕಾಗುತ್ತದೆ. ಮನುಷ್ಯರಾದ ನಾವುಗಳು ಏಕಾಗ್ರತೆಯ ಚಿತ್ತವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಏಕಾಗ್ರತೆಯನ್ನು ಪಡೆಯಬೇಕಾದರೆ ಧ್ಯಾನವನ್ನು ಮಾಡಬೇಕು ಎಂದು ಹೇಳಿಕೊಡುವ ಯೂಟ್ಯೂಬ್, ಗೂಗಲ್, ಇನ್ನಿತರ ವ್ಯಕ್ತಿಗಳ ಮಾತಿನಿಂದ ಪ್ರೇರೇಪಣೆ ಹೊಂದಿ ಏಕಾಗ್ರತೆ ಪಡೆಯಲು ಸಾಧ್ಯವೇ  ಇಲ್ಲ. ಕೇವಲ ಅದು ಮೂರು ದಿನಗಳಲ್ಲಿ   ಅವರ ಪ್ರೇರೇಪಣೆ ಮರೆಮಾಚುತ್ತದೆ.  ಏಕಾಗ್ರತೆಯ ಚಿತ್ತವನ್ನು ಪಡೆಯಬೇಕಾದಲ್ಲಿ ಸ್ವಯಂ ಪ್ರೇರಣೆ ಬಹುಮುಖ್ಯ ಪಾತ್ರವನ್ನುವಹಿಸುತ್ತದೆ.   ಅರ್ಥವಿಲ್ಲದ ವಿಷಯಗಳಿಗೆ ನಮ್ಮ ಚಿತ್ತವನ್ನು ಹೂಡಿಕೆ ಮಾಡಿದರೆ  ಯಾವುದೇ ರೀತಿಯ ಪ್ರತಿಫಲ ನಮಗೆ ಸಿಗುವುದಿಲ್ಲ. ವ್ಯವಹಾರಿಕ ಶಾಸ್ತ್ರದಲ್ಲಿ ಅಧ್ಯಯನ ಮಾಡಿದ ರೀತಿಯಲ್ಲಿ ಹೇಳುವುದಾದರೆ ಹೂಡಿಕೆಯನ್ನ ಮಾಡುವ ಉದ್ದೇಶವೇ  ಅಧಿಕ ಪ್ರಮಾಣದಲ್ಲಿ ಲಾಭವನ್ನು ಪಡೆಯುವ ಉದ್ದೇಶದಿಂದ. ಆ ಲಾಭವನ್ನ ಪಡೆಯಬೇಕಾದಲ್ಲಿ ನಾವು ಸರಿಯಾದ ರೀತಿಯ ಕೆಲಸದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಹಾಗೆಯೇ ನಮ್ಮ ಜೀವನದಲ್ಲಿ ಯಶಸ್ಸನ್ನ ಪಡೆಯಲು  ಚಿತ್ತ ಎಂಬ  ಅಮೂಲ್ಯವನ್ನು ಹೂಡಿಕೆ ಮಾಡುವುದರಲ್ಲಿ ಎಚ್ಚರವಿರಲಿ. ಕಾರಣ ಸಮಯ ಮರಳಿ ಬರುವುದಿಲ್ಲ. ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕಿತ್ತು ಎಂದು ಕೊರಗುವ  ಬದಲು ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. “ದುಡಿಯುವ ವಯಸ್ಸಿನಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ವಯಸ್ಸಿನಲ್ಲಿ  ಅಂಗಲಾಚಬೇಕಾಗುತ್ತದೆ .ಎಚ್ಚರ “ಚಿತ್ತ ಬದುಕಿನ ಸೂತ್ರದಾರ”.

– ಕರೇಗೌಡ್ರು ದಿವ್ಯ.

ಕೊಟ್ಟುರೇಶ್ವರ ಕಾಲೇಜು.

ಕೊಟ್ಟೂರು.