
ವಾಡಿ: ಮೇ.11: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಚಿತ್ತಾಪೂರ ತಾಲ್ಲೂಕಿನಲ್ಲಿ ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದುದ್ದನ್ನು ಬಿಟ್ಟರೇ ಬಹುತೇಕ ಕಡೆ ಶಾಂತಿಯುತವಾಗಿ ಮತದಾರರು ಮತದಾನ ಮಾಡಿರುವುದು ಕಂಡು ಬಂತು.
ಚಿತ್ತಾಪೂರ ತಾಲ್ಲೂಕಿನ ಚಾಮನೂರ ಗ್ರಾಮದಲ್ಲಿ ಅಧಿಕಾರಿಯೊಬ್ಬ ಸೂಚನೆ ಮತದಾನ ಮಾಡುವಾಗ ಮತದಾರಳ ಇಚ್ಛೆಯ ವಿರುದ್ದವಾಗಿ ಮತದಾನ ಮಾಡಿದ್ದ ಎಂದು ಆರೋಪಿಸಲಾಯಿತ್ತು. ಅಧಿಕಾರಿಯನ್ನು ಬದಲಾಯಿಸಿದ ನಂತರ ಶಾಂತಿಯುತವಾಗಿ ಮತದಾನ ನಡೆಯಿತ್ತು.
ಚಿತ್ತಾಪೂರ ತಾಲ್ಲೂಕಿನ ಕಮರವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 173 ಮತ್ತು 174 ರಲ್ಲಿ ಬೆಳಗ್ಗೆ ಮತಯಂತ್ರ ಕೈಕೊಟ್ಟಿರುವುದರಿಂದ ಸುಮಾರು 35 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತ್ತು. ಕಮರವಾಡಿ ಗ್ರಾ.ಪಂ ವ್ಯಾಪ್ತಿಯ ದೇವಾಪೂರ ತಾಂಡದಲ್ಲಿ ಒಟ್ಟು 602 ಮತದಾರರ ಪೈಕಿ 542 ಜನ ಮತದಾನ ಮಾಡಿ ಶೇಕಡಾ 90% ಮತದಾನ ಮಾಡುವ ಮೂಲಕ ಗಮನ ಸೆಳೆದರು.
ಮತದಾರರು ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು, ಮಧ್ಯಾಹ್ನ ಬಿಸಿಲಿನ ಜಳಪಿಗೆ ಮನೆಯಿಂದ ಹೊರ ಬರದ ಕಾರಣ ಮಟಗಟ್ಟೆಯಲ್ಲಿ ಕಡಿಮೆ ಮತದಾರರು ಕಂಡು ಬಂದರು. ಸಾಯಾಂಕಾಲ 4 ಗಂಟೆಯಾಗುತ್ತಿದ್ದಂತೆ ಬಹುತೇಕ ಮತದಾನ ಕೇಂದ್ರದಲ್ಲಿ 100ಕ್ಕೂ ಅಧಿಕ ಮತದಾರರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು. ಚಿತ್ತಾಪೂರ ಮತಕ್ಷೇತ್ರದಲ್ಲಿ ಶೇ.64.32 ಮತದಾನ ಮಾಡಲಾಯಿತ್ತು ಎಂದು ಚುನಾವಣಾ ಅಧಿಕಾರಿ ತಿಳಿಸಿದರು. ಮತಪಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ. ಮೇ 13ಕ್ಕೆ ಫಲಿತಾಂಶ.