ಲಿಂಗಸುಗೂರು,ಜೂ.೦೭-
ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಅಮೃತ ಸರೋವರ ಕೆರೆ ಕಾಮಗಾರಿ ಸ್ಥಳಕೆ ಮೋತಿ ರಾಮ ಸಹಾಯಕ ಆಯುಕ್ತರು ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಭಾರತ ಸರ್ಕಾರ ನವ ದೆಹಲಿ ಭೇಟಿ ನೀಡಿ ಪರೀಶಿಲಿಸಿದರು.
ಸ್ಥಳೀಯ ರೈತರು, ನರೇಗಾ ಕೂಲಿಕರಾರು, ಕುರಿಗರಾರು, ಧನ,ಕರು ಕಾಯುವವರು ಇವರ ಜೊತೆ ಚರ್ಚೆ ಮಾಡಿದರು. ನಂತರ ಕಾಮಗಾರಿಯು ಉತ್ತಮ ವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ರಾಯಚೂರು, ಅಮರೇಶ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಲಿಂಗಸಗೂರು ಸೋಮನಗೌಡ ಪಾಟೀಲ್ ಸಹಾಯಕ ನಿರ್ದೇಶಕರು.ಗ್ರಾ. ಉ., ವೆಂಕಟೇಶ ದೇಸಾಯಿ ಸಹಾಯಕ ನಿರ್ದೇಶಕರು ಗ್ರಾ. ಉ. ರಾಯಚೂರು, ಗ್ರಾಮ ಪಂಚಾಯತ್ ಅಧ್ಯಕ್ಷರು ಚಿತ್ತಾಪುರ,ಹನಮನಗೌಡ ತಾಂತ್ರಿಕ ಸಂಯೋಜಕರು, ಶಶಿಕಲಾ ಪಾಟೀಲ್ ಚಿತ್ತಾಪುರ, ಬಾಲಪ್ಪ ತಾಲೂಕು ಐ. ಇ. ಸಿ. ಸಂಯೋಜಕರು ಲಿಂಗಸಗೂರು, ಹರ್ಷವರ್ಧನ್ ತಾಂತ್ರಿಕ ಸಹಾಯಕರು, ಮುಖಂಡ ಯೆಂಕಪ್ಪ ಚಿತ್ತಾಪೂರ,ರೈತರು, ಕುರಿಗಾರರು, ಅಮೃತ ಸರೋವರದ ಫಲಾನುಭವಿಗಳು ಹಾಜರಿದ್ದರು.