ಚಿತ್ತರಂಜನ ದಾಸ್ ಕೊಡುಗೆ ಅನನ್ಯ

ಕಲಬುರಗಿ:ನ.7: ‘ದೇಶಬಂಧು’ ಎಂಬ ಖ್ಯಾತಿಯ ಚಿತ್ತರಂಜನ ದಾಸ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ಸಾಹಿತಿಯಾಗಿ ದೇಶಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದಲ್ಲಿನ ಎಂ.ಎಂ. ಎನ್ ಟ್ಯೂಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಇತ್ತಿಚಿಗೆ ಜರುಗಿದ ‘ಚಿತ್ತರಂಜನ ದಾಸ್ ಜನ್ಮದಿನಾಚರಣೆ’ಯಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.

 ದಾಸ್ ಅವರು ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದ್ದಾರೆ. ತಮ್ಮ ಹರಿತವಾದ ಬರವಣಿಗೆಯ ಮೂಲಕ ಬ್ರಿಟಿಷರ ಶೋಷಣೆಯನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಜನಸಾಮಾನ್ಯರು ಕೂಡಾ ಭಾಹವಹಿಸುವಂತೆ ಮಾಡಲು ಪ್ರೇರಣೆ ನೀಡಿದರೆಂದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾವ ಮಂಗಾಣೆ, ಬಸವರಾಜ ಎಸ್.ಪುರಾಣೆ, ಅಮರ ಜಿ.ಬಂಗರಗಿ, ಮಹಾದೇವ, ಎಸ್.ಎಸ್.ಪಾಟೀಲ ಬಡದಾಳ, ಮಹಾಂತೇಶ ಬಿರಾದಾರ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.