ಚಿಣ್ಣರ ಶ್ರೀಕೃಷ್ಣ ರಾಧೆಯ ವೇಷ ಭೂಷಣ ಸ್ಪರ್ಧೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೩: ಲಯನ್ಸ್ ಕ್ಲಬ್ ದಾವಣಗೆರೆ, ಜ್ಞಾನಸೌರಭ ಕಲ್ಚರಲ್ ಮತ್ತು ಏಜ್ಯುಕೇಷನಲ್ ಟ್ರಸ್ಟ್ ಹಾಗೂ ಎಸ್‌ಜೆಎಂ ಪಬ್ಲಿಕ್ ಶಾಲೆ ನಿಟುವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನಗರ ಮಟ್ಟದ ಚಿಣ್ಣರ ಶ್ರೀಕೃಷ್ಣ ರಾಧೆಯ ವೇಷ ಭೂಷಣ ಸ್ಪರ್ಧೆ ನಗರದ ಲಯನ್ಸ್ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ವಲಯ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್ ಉದ್ಘಾಟಿಸಿದರು, ಕಾರ್ಯದರ್ಶಿ ಭೀಮಾನಂದ ಶೆಟ್ಟಿ, ನೀಲಿ ಉಮೇಶ್, ಟ್ರಸ್ಟ್ ಅಧ್ಯಕ್ಷ ಡಿ. ಮಹೇಶ್ವರಪ್ಪ, ಕೆ.ಟಿ. ಮಹಾಲಿಂಗಪ್ಪ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಂತಯ್ಯ ಪರಡೀಮಠ ಮತ್ತು ಪ್ರಿಯಾಂಕ ಸಚ್ಚಿನ್ ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು