ಚಿಟ್ಟಾ ಗ್ರಾಪಂನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜನಜಾಗೃತಿ

ಬೀದರ:ಮೇ.26: ತಾಲೂಕಿನ ಚಿಟ್ಟಾ ಗ್ರಾಮ ಪಂಚಾಯತ ವತಿಯಿಂದ ಇತ್ತೀಚಿಗೆ ಕೋವಿಡ್ -19 ನಿಯಂತ್ರಣದ ಟಾಸ್ಕ್ ಫೆÇೀರ್ಸ್ ಸಮಿತಿಯ ತುರ್ತು ಸಭೆಯು ಗ್ರಾಪಂ ಅಧ್ಯಕ್ಷರಾದ ರಮೇಶ್ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ರಮೇಶ್ ಬಿರಾದಾರ ಅವರು ಮಾತನಾಡುತ್ತ, ಕೋವಿಡ್ ನಿಯಂತ್ರಣ ತಡೆಗಟ್ಟಲು ಸರ್ಕಾರದ ಆದೇಶ ಪಾಲಿಸಲೇಬೇಕು ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾಸ್ ಹಾಕಿಕೊಳ್ಳಬೇಕು. ಹಾಕಿಲ್ಲ ಅಂದರೆ ನೂರು ರೂಪಾಯಿ ದಂಡ ವಿಧಿಸಬೇಕು ಎಂದು ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಹಾಮಾರಿ ರೋಗ ತಡೆಗಟ್ಟಲು ಸೂಚಿಸಲಾಯಿತು

ಈ ಸಂದರ್ಭದಲ್ಲಿ ಪೆÇಲೀಸ್ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತರು ಆರೋಗ್ಯ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.