ಚಿಟ್ಟಾವಾಡಿ ಗ್ರಾಮದಲ್ಲಿ ಮಹಿಳಾ ದಿನಾಚರಣೆ

ಬೀದರ.ಮಾ 18: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬೀದರ ಶಾಖೆಮತ್ತು ಸಮರಸ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಚಿಟ್ಟಾವಾಡಿ ಗ್ರಾಮದಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಬಗ್ದಲ್ ಪೊಲೀಸ್ ಠಾಣೆಯ ಸಹಾಯಕಉಪನಿರೀಕ್ಷಕರಾದ ಅನಿತಾ ಮೂಲ್ಗೆ ಅವರು ಹೆಣ್ಣು ಸಂಸಾರದ ಕಣ್ಣು.ಮಹಿಳೆಯರು ಆದರ್ಶಪ್ರಾಯರಾಗಿ, ಮಾದರಿಯಾಗಿ ಬೆಳೆಯಬೇಕು. ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆ ತಡೆಯಬೇಕು, ಹೆಣ್ಣು ಅಬಲೆಯಲ್ಲಸಬಲೆ. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನಒತ್ತು ನೀಡಿ, ಸಶಕ್ತೀಕರಣ ಹೊಂದಿ ಅಭಿವೃದ್ದಿ ಹೊಂದಬೇಕು ಎಂದರು.ಸಮರಸ ಸಂಸ್ಥೆಯ ಅಧ್ಯಕ್ಷರಾದ ವೇದಮಣಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಫ್‍ಪಿಎಐಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಅಂಬುಜಾ ವಿಶ್ವಕರ್ಮಅವರು ಮಹಿಳೆಯರಿಗಿರುವ ಕಾಯಿದೆ-ಕಾನೂನುಗಳ ಬಗ್ಗೆ ವಿವರಿಸಿ, ಮಾಹಿತಿ ತಿಳಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ರೇಖಾ ಚಂದಾ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಬೀದರ ತಾಪಂ ಸಹಾಯಕ ನಿರ್ದೇಶಕರಾದಕವಿತಾ, ಚಿಟ್ಟಾ ಗ್ರಾಪಂ ಅಧ್ಯಕ್ಷ ರಮೇಶ ಬಿರಾದಾರ,ಉಪಾಧ್ಯಕ್ಷರು, ಇನ್ನಿತರ ಸದಸ್ಯರು,ಪಿಡಿಒ ಮುಖ್ಯಗುರುಗಳು, ಡಾ. ನೀತಾ ಶೈಲೇಂದ್ರ ಬೆಲ್ದಾಳೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯ ಶಾಖಾ ವ್ಯವಸ್ಥಾಪ ಶ್ರೀನಿವಾಸ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮರಸ ಸಂಸ್ಥೆಯ- ಸುಗ್ರಾಮ ಒಕ್ಕೂಟ ಕರ್ನಾಟಕದ ರಾಜ್ಯಧ್ಯಕ್ಷರಾದ ಜಗದೇವಿ ಅವರು ಸ್ವಾಗತಿಸಿದರು ಹಾಗೂ ಸಿಬ್ಬಂದಿಯಾದ ಲಲಿತಾ ಅವರು ವಂದಿಸಿದರು. ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುU ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಪುರಸ್ಕøತರಾದ ಚಿಟ್ಟಾವಾಡಿ ಗ್ರಾಮದ ಶಾಂತಮ್ಮ ಅವರನ್ನುಸನ್ಮಾನಿಸಲಾಯಿತು.