ಚಿಟ್ಟಾವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬೀದರ:ಜೂ.6: ತಾಲೂಕಿನ ಚಿಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಟ್ಟಾವಾಡಿ ಗ್ರಾಮದ ಅಂಗನವಾಡಿ ಕೇಂದ್ರಗಳ ಆವರಣಗಳಲ್ಲಿ ಕಚೇರಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಸಸಿ ನೆಡೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡುತ್ತ, ಪರಿಸರದ ನಾಶದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಹೀಗಾಗಿ ಎಲ್ಲರು ತಮ್ಮ ತಮ್ಮ ಮನೆಗಳ ಮುಂದೆ ಸಿಸಿಗಳು ನೆಡುವ ಮೂಲಕ ಉತ್ತಮ ಪರಿಸರದಲ್ಲಿ ಬದುಕಬೇಕು ಎಂದರು.

ಬೀದರ ತಹಸೀಲ್ದಾರ ಶ್ರೀಮತಿ ಗಂಗಾದೇವಿ ಅವರು ಮಾತನಾಡುತ್ತ, ಹಸಿರೇ ಮನುಷ್ಯನ ಜೀವನದ ಉಸಿರಾಗಿದೆ. ಆದರೂ ಮಾನವ ಇಂದು ಪರಿಸರ ನಾಶ ಮಾಡುವ ಬದಲು ಉಳಿಸುವ ಕೆಲಸ ಮಾಡಬೇಕು ಎಂದರು.

ಶಿಶು ಅಭಿವೃದ್ಧಿ ಬೀದರ ತಾಲೂಕಿನ ಯೋಜನಾಧಿಕಾರಿಗಳು ಮಾತನಾಡುತ್ತ, ಕೋವಿಡ್-19 ಸಂದರ್ಭದಲ್ಲಿ ಆಕ್ಸಿಜೆನ್ ಕೊರತೆ ಹೆಚ್ಚೆಚ್ಚು ಕಂಡು ಬಂದಿದೆ. ಪರಿಸರದಿಂದ ಆಕ್ಸಿಜೆನ್ ದೊರೆಯುತ್ತದೆ. ಜೀವ ಹಾಗೂ ಜೀವನ ಎರಡು ಉಳಿಯುತ್ತವೆ ಎಂದರು.

ರಮೇಶ ಬಿರಾದಾರ ಚಿಟ್ಟಾ ಅವರು ಮಾತನಾಡುತ್ತ, ಜಿಲ್ಲಾ ಪಂಚಾಯತ, ಸಾಮಾಜಿಕ ಅರಣ್ಯ ವಿಭಾಗ ಬೀದರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಟ್ಟಾವಾಡಿ ಗ್ರಾಮದ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾತನಾಡುತ್ತ, ಮಕ್ಕಳ ದೇಶದ ಆಸ್ತಿ ಎನ್ನುತ್ತೇವೆ. ಈ ಮಕ್ಕಳು ಅಂಗನವಾಡಿ ಪರಿಸರದಲ್ಲಿ ಬೆಳೆಯುತ್ತವೆ. ಹೀಗಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 10 ಸಸಿಗಳು ನೆಡಬೇಕು. ಇದರಿಂದ ಮಕ್ಕಳು ಹಸಿರು ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತವೆ ಎಂದರು.

ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರು, ಚಿಟ್ಟಾ ಗ್ರಾಮ ಪಂಚಾಯತ ಸದಸ್ಯರಾದ ಚಂದ್ರಕಾಂತ ನಾಗಪ್ಪ ಮರಕುಂದೆ, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಗ್ರಾಮಸ್ಥರು ಇದ್ದರು.