ಚಿಟಗುಪ್ಪ ಶಾಂತಿಯುತ ಗಣೇಶ ವಿಸರ್ಜನೆ

ಚಿಟಗುಪ್ಪ :ಸೆ.24:ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಐದು ದಿನಗಳ ಕಾಲ ನಡೆದ ಗಣೇಶೋತ್ಸವ ಶಾಂತಿಯುತವಾಗಿ ಕೊನೆ ಗೊಂಡಿತು.
ಚಿಟಗುಪ್ಪ ಪಟ್ಟಣದಲ್ಲಿ ಸುಮಾರು 25ರಿಂದ 28 ದೊಡ್ಡ ಗಣೇಶ್ ಮೂರ್ತಿಗಳು ಶನಿವಾರ ರಾತ್ರಿ ವಿಸರ್ಜನೆಗೊಂಡವು.
ಪಟ್ಟಣದ ಗಾಂಧಿ ವೃತ್ತದಲ್ಲಿ ಕೂ ಡಿಸಲಾಗಿದ್ದ ಬೆಳ್ಳಿ ಗಣೇಶ ಪ್ರಮುಖ ಆಕರ್ಷಣೆಯಾಗಿತ್ತು ಗಣೇಶವಾಡಿ ಗಣೇಶ ಬನಶಂಕರಿ ಗಲ್ಲಿ ಗಣೇಶ ಕುಂಬಿವಾಡಿ ಗಣೇಶ ಮಾರ್ಕೆ0ಡೇಶ್ವರ್ ಗಣೇಶ ಬಾಳೋಬಾ ಮಹಾರಾಜ್ ಗಣೇಶ ಸೇರಿದಂತೆ ಇನ್ನೂ ಅನೇಕ ಪ್ರಮುಖ ಬಡಾವಣೆಯ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.
ತಾಲೂಕಿನ ಮನ್ನಾಎಖೇಳಿ ನಿರ್ಣಾ ಚಾಂಗಲೇರಾ ಬೇಮಳಖೇಡ ಸೇರಿದಂತೆ ಇತರ ಗ್ರಾಮಗಳಲ್ಲಿ ಐದು ದಿನಗಳ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಇಲಾಖೆ ಸೂಕ್ತ ಬಂದೋಬಸ್ ಕೈಗೊಂಡಿತ್ತು.