ಚಿಟಗುಪ್ಪ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ಡಾ.ಸಿದ್ದು ಪಾಟೀಲ್

ಚಿಟಗುಪ್ಪಾ. ಮಾ.14: ಹೊಸ ತಾಲೂಕಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಚಿಟಗುಪ್ಪ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಡಾಸಿದ್ದು ಪಾಟೀಲ್ ನುಡಿದರು.
ಪಟ್ಟಣದಲ್ಲಿ ನೂತನ ಪಶು ಆಸ್ಪತ್ರೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರ್ ಡಿ ಎಫ್ ಯೋಜನೆ ಅಡಿಯಲ್ಲಿ 51 ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಪಶು ಆಸ್ಪತ್ರೆ ಕಾಮಗಾರಿ ಶೀಘ್ರವಾಗಿ ಮುಗಿಯಲಿ ಇದರಿಂದ ಈ ಭಾಗದ ರೈತ ವರ್ಗದವರಿಗೆ ಅನುಕೂಲವಾಗಲಿದೆ ಎಂದು ನುಡಿದರು.
ಪುರಸಭೆ ಮುಖ್ಯಾಧಿಕಾರಿ ಶಿವಾನಂದ್ ಭೋಸಲೆ ಪಶುವೈದ್ಯಾಧಿಕಾರಿ ಶಾಂತವೀರ್ ಗೋಪಾ ಅಭಿಯಂತ ಸಂಜು ಕುಮಾರ್ ಪಶುವೈದ್ಯ ಸಾಗರ್ ಪುರಸಭೆ ವ್ಯವಸ್ಥಾಪಕಿ ವಾಣಿ ಕುಲಕರ್ಣಿ, ಪರಿಸರ ಅಭಿಯಂತೆ ಪೂಜಾ ಪನಶೆಟ್ಟಿ,ಅರೋಗ್ಯ ನಿರೀಕ್ಷಕ ರವಿ ಮುಖಂಡರಾದ ಬಿಜೆಪಿ ಪಟ್ಟಣ ಘಟಕದ ಅಧ್ಯಕ್ಷ ಪ್ರವೀಣ ರಾಜಪುರ, ಗಿರೀಶ್ ತುಂಬಾ, ಅನಿಲ್ ಜೋಶಿ, ಶ್ಯಾಮ್ ಭೂತಾಳೆ, ಎಸ್ ಧರ್ಮೇಶ್, ದತ್ತಾತ್ರಿ, ಸಂಜು ಪಟ್ಟಣಕರ್, ರಾಜೇಂದ್ರ ಶಂರಾವ್ ಭೂತಲೇ ಸುನಿಲ್ ದರ್ವೇಶ್ ಇತರರಿದ್ದರು.