ಚಿಟಗುಪ್ಪಾ ತಾಲ್ಲೂಕಿನ ಕೋರೋನಾ ವಾರಿಯರ್ಸಗೆ ಸನ್ಮಾನಿಸಿದ ಸಚಿವ ಪ್ರಭು ಚವ್ಹಾಣ

ಬೀದರ:ಜೂ.3: ಪಶು ಸಂಗೋಪನಾ ಹಾಗೂ ಬೀದರ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಜೂನ.1 ರಂದು ಚಿಟಗುಪ್ಪಾ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಕೋರೋನಾ ವಾರಿಯರ್ಸಗೆ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ 2020ರಲ್ಲಿ ಒಕ್ಕರಿಸಿದ ಕೋರೋನಾ ವೈರಸ್ ಜನರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು. ಅದೇ ರೀತಿ ಈ ವರ್ಷವು ಕೂಡ 2ನೇ ಅಲೆಯ ರೂಪದಲ್ಲಿ ಜನರನ್ನು ಕಾಡುತ್ತಿದೆ. ಈ ಕೋರೋನಾ ವೈರಸ್ ಮಹಾಮಾರಿಯಿಂದಾಗಿ ನಾವು ಕೆಲವರನ್ನು ಕಳೆದುಕೊಂಡಿದ್ದೇವೆ. ಈ ವೈರಸ್ ನ್ನು ನಿಗ್ರಹಿಸಲು ಜಿಲ್ಲಾಡಳಿತ, ತಾಲ್ಲೂಕಾ ಆಡಳಿತ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ ಸೇರಿದಂತೆ ಬಹಳಷ್ಟು ಇಲಾಖೆಗಳು ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ. ತಮ್ಮ ಜೀವಕ್ಕೆ ಹೆದರದೆ ಕೋರೋನಾ ಸೋಂಕಿತರ ಸೇವೆ ಮಾಡಿದ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಗೌರವಿಸಿ ನಾವು ಅವರನ್ನು ಕೋರೋನಾ ವಾರಿಯರ್ಸ ಎಂದು ಸನ್ಮಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಮನಾಬಾದ ಶಾಸಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಚಿಟಗುಪ್ಪಾ ತಾಲ್ಲೂಕಿನಲ್ಲಿ ಈಗಾಗಲೇ 12,000 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅಲ್ಲದೇ ಚಿಟಗುಪ್ಪಾ ತಾಲ್ಲೂಕು ವ್ಯಾಪ್ತಿಯ ಹಳ್ಳಿ ಹಳ್ಳಿಯಲ್ಲಿ ಕೂಡ ಕೋರೋನಾ ಲಸಿಕೆ ನೀಡಲಾಗುತ್ತಿದೆ. ತಾವು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇನ್ನೀತರರು ಈ ಕೋವಿಡ್ ತಡೆ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ 6 ಜನ ವೈದ್ಯಾಧಿಕಾರಿಗಳು, 3 ಜನ ಫಾರ್ಮಸಿ ಅಧಿಕಾರಿಗಳು, 7 ಜನ ಶುಶ್ರೂಷಕರು, 4 ಜನ ಡಾಟಾ ಎಂಟ್ರಿ ಆಪರೇಟರ್, 3 ಜನ ಲ್ಯಾಬ್ ಟೆಕ್ನಿಷಿಯನ್, 3 ಜನ ಆಪ್ತ ಸಹಾಯಕರು, 2 ಇಬ್ಬರು ವಾಹನ ಚಾಲಕರು, 7 ಜನ ಗ್ರೂಪ ಡಿ ನೌಕರರು, 2 ಗ್ರೇಡ್-2 ಕೆಮಿಕಲ್ ಅಟೆಂಡರ್, 3 ಹೊರ ಗುತ್ತಿಗೆ ನೌಕರರು, 5 ಆಶಾ ಕಾರ್ಯಕರ್ತೆಯರು, 6 ಜನ ಅಂಗನವಾಡಿ ಕಾರ್ಯಕರ್ತೆಯರು, 5 ಜನ ಚಿಟಗುಪ್ಪಾ ಪುರಸಭೆಯ ಕೋರೋನಾ ವಾರಿಯರ್ಸ್, 6 ಜನ ಪೆÇಲೀಸ್ ಇಲಾಖೆಯ ಕೋರೋನಾ ವಾರಿಯರ್ಸ್, 3 ಜನ ಕಂದಾಯ ಇಲಾಖೆಯ ಕೋರೋನಾ ವಾರಿಯರ್ಸ್ ಸೇರಿ ಒಟ್ಟು 64 ಜನರನ್ನು ಇದೇ ವೇಳೆ ಸಚಿವರು ಶಾಲು ಹೋದಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಮುಖಂಡರಾದ ಸುಭಾಷ್ ಕಲ್ಲೂರ ಹಾಗೂ ಪುರಸಭೆಯ ಅಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಇನ್ನೀತರರು ಇದ್ದರು.