ಚಿಗುರು ಕಲಾ ತಂಡಕ್ಕೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ

ಬಳ್ಳಾರಿ,ಮಾ.31: ಚಿಗುರು ಕಲಾ ತಂಡವು ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರಿಂದ ಸೋಮವಾರ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ.
ನೆಹರು ಕೇಂದ್ರದ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡುವಂತಹ ಯುವ ಸಂಘಗಳಿಗೆ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ ಪ್ರಥಮವಾಗಿ ಚಿಗುರು ಕಲಾ ತಂಡ ಇಬ್ರಾಹಿಂಪುರ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಮತ್ತು ವಿಜಯ ಮಹಿಳಾ ಸಂಘ ರೇಡಿಯೋ ಪಾರ್ಕ್ ಉತ್ತಮ ಪ್ರಶಸ್ತಿಯನ್ನು ಪಡೆದಿವೆ.