ಚಿಗಟೇರಿ ನಾರದಮುನಿ ಸ್ವಾಮಿ ರಥೋತ್ಸವ ರದ್ದು

ಹರಪನಹಳ್ಳಿ.ಏ.೨೬; ಮೇ 1 ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ಸ್ವಾಮಿ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದ್ದಾರೆ.ಕೊರೊನಾ ಹೆಚ್ಚಳ ಹಿನ್ನೆಲೆ ಸರ್ಕಾರದ ಮಾರ್ಗಸೂಚಿ ಹಿನ್ನೆಲೆ ಸೇವಾ ಟ್ರಸ್ಟ್ ರಥೋತ್ಸವ ರದ್ದು ಮಾಡಿದೆ. ಭಕ್ತರು ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇನ್ನು ಓಕಳಿ ಉತ್ಸವ ಇರುವುದಿಲ್ಲ. ಭಕ್ತರು ಜಾತ್ರೆ ನೆಪದಲ್ಲಿ ಬರುವಂತಿಲ್ಲ ಎಂದು ಸೇವಾ ಟ್ರಸ್ಟ್ ತಿಳಿಸಿದೆ.