ಚಿಗಟೇರಿಯಲ್ಲಿ ರೈತ ಚೈತನ್ಯ ಯಾತ್ರೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.23: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ (ಕರ್ನಾಟಕ ಗ್ರಾಮೀಣ ಬ್ಯಾಂಕಿನ) ಮುಂದೆ ಬಳ್ಳಾರಿಯ ರೈತ ಚೈತನ್ಯ ಯಾತ್ರೆ ತಲುಪಿದೆ, ಗ್ರಾಮದ ರೈತರಿಗೆ 29 ರಂದು  ಬೆಂಗಳೂರಿನಲ್ಲಿ ನಡೆಯುವ ಫ್ರೀಡಂ ಪಾರ್ಕ್ ನಿಂದ ಪಾದಯಾತ್ರೆ ಮೂಲಕ ಆರ್ ಬಿ ಐ  ಬ್ಯಾಂಕಿನ ಮುಂದೆ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದುಸಂಘದ  ರಾಜ್ಯಾದಕ್ಷ ಆರ್. ಮಾಧವ ರೆಡ್ಡಿ ಅವರು ಹೊಸಪೇಟೆಯ ಜಿಲ್ಲಾಧ್ಯಕ್ಷ ಕಾಳಿದಾಸ ಅವರ ಜೊತೆಗೂಡಿ ಮನವಿ ಮಾಡಿದರು.