ಚಿಕ್ಕ ಹುಣಸೂರು ರಸ್ತೆ ಧೂಳುಮಯ

ಹುಣಸೂರು,ನ.09:-ನಗರದಚಿಕ್ಕಹುಣಸೂರು ವ್ಯಾಪ್ತಿಯಲ್ಲಿನಎರಡು ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ಕಳೆದ 8 ತಿಂಗಳ ಹಿಂದೆ ಪ್ರಾರಂಭಿಸಿದ ಕಾಮಗಾರಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದು, ಇಲ್ಲಿನ ನಿವಾಸಿಗಳು, ವ್ಯಪಾರಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಧೂಳೂ ಕುಡಿಯುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಡೀಡ್ ಸಂಸ್ಥೆಯ ನಿರ್ದೇಶಕರಾದ ಡಾಡೀಡ್ ಶ್ರೀಕಾಂತ್ ದೂರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಧೂಳಿನದು ಒಂದು ಸಮಸ್ಯೆಯಾದರೆ ಸಂಪೂರ್ಣ ಚಿಕ್ಕಹುಣಸೂರಿನ ಚರಂಡಿ ನೀರನ್ನುಸಮೀಪದಗದ್ದೆ ಬೈಯಲಿಗೆ ಬಿಡಲಾಗಿದ್ದು, ಇದರಿಂದ ಮತ್ತೋಂದು ಸಮಸ್ಯೆ ಸೃಷ್ಠಿಯಾಗಿದೆ.
ಕೂಡಲೆ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಪಿ.ಡಬ್ಯೂ.ಡಿ ಲೋಕಪಯೋಗಿ ವಿಭಾಗದ ಎಇಇ ಬೋಜರಾಜ್ ಖುದ್ದಾಗಿ ಸ್ಥಳಕ್ಕೆ ಭೇಟಿ ಮಾಡಿ ತ್ವರಿತಗತಿಯಲ್ಲಿ ಈ ಕೆಲಸವನ್ನು ಪೂರೈಸಿಕೊಡಬೇಕೆಂದು ಚಿಕ್ಕ ಹುಣಸೂರಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಕೆರೆಗೆ ಕುತ್ತು:
ಚಿಕ್ಕಹುಣಸೂರಿನ ಕೆರೆಯನ್ನು ಪ್ರವಾಸಿತಾಣ ಮಾಡಲು ಸರ್ಕಾರದಿಂದಒಂದುಕೋಟಿಗೂ ಹೆಚ್ಚು ವೆಚ್ಚಮಾಡಿ ಸುತ್ತಲು ವಾಕಿಂಗ್‍ಪಾತ್ ನಿರ್ಮಿಸಿದ್ದು, ಕೆಲ ಕಡೆಇನ್ನೂಪೂರ್ಣಗೊಳ್ಳದೆ ಇರುವುದರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ.
ಕೆರೆಯ ಸುತ್ತಮುತ್ತ ಬಡಾವಣೆಗಳು ಬರುತ್ತಿರುವುದರಿಂದ ಬಡಾವಣೆಗಳ ಕೊಳಚೆನೀರು ಕೆರೆಗೆ ಹರಿಯದಂತೆ ಕೂಡಲೆ ಕ್ರಮವಹಿಸಬೇಕು.
ಅಲ್ಲದೆಕೆರೆಯ ಪಕ್ಕದಲ್ಲಿ ಪಾರ್ಕ್ ನಿರ್ಮಾಣ ಮಾಡಲು ನಿಗಧಿಪಡಿಸಿದ ಜಾಗದಲ್ಲಿತ್ಯಾಜ್ಯ ವಸ್ತುಗಳನ್ನು ಸುರಿಯಲಾಗುತ್ತಿದ್ದು, ಸ್ಥಳಿಯ ಆಡಳಿತ ಕೂಡಲೆ ಕ್ರಮವಹಿಸುವಂತೆ ಚಿಕ್ಕಹುಣಸೂರಿನ ನಿವಾಸಿಗಳು ವಿನಂತಿಸಿದ್ದಾರೆ.