ಚಿಕ್ಕ ಗರಸಂಗಿ ಗ್ರಾಮದ ಮದುವೆ ಸಮಾರಂಭ-ಮನೆ ಮನೆಗೆ ತೆರಳಿ ಮತದಾನ ಜಾಗೃತಿ

ವಿಜಯಪುರ:ಮೇ.6: ತಾಲೂಕ ಸ್ವೀಪ್ ಸಮಿತಿ ಕೊಲ್ಹಾರ ಹಾಗೂ ಗ್ರಾಮ ಪಂಚಾಯತಿ ರೋಣಿಹಾಳ ಇವರ ವತಿಯಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿಯ ಚಿಕ್ಕ ಗರಸಂಗಿ ಗ್ರಾಮದಲ್ಲಿ ಇಂದು ಮನೆ – ಮನೆಗೆ ತೆರಳಿ ಮತದಾನ ಜಾಗೃತಿಯ ಕರ ಪತ್ರಗಳನ್ನು ಹಂಚಿ ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡಲು ಕೋರಿ ಮತದಾನ ಜಾಗೃತಿ ಮೂಡಿಸಲಾಯಿತು.
ಮದುವೆ ಸಮಾರಂಭದಲ್ಲಿ ಜಾಗೃತಿ : ಜೊತೆಗೆ ಗ್ರಾಮದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಕ್ಕೆ ತೆರಳಿ ಮತದಾನ ಜಾಗೃತಿ ಕರ ಪತ್ರಗಳನ್ನು ಹಂಚಿಕೆ ಮಾಡಿ, ಮತದಾನದ ಜಾಗೃತಿ ಮೂಡಿಸಲಾಯಿತು. ಮತದಾನ ನಮ್ಮೆಲ್ಲರ ಹಕ್ಕು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಐಇಸಿ ಸಂಯೋಜಕರಾದ ಸಂತೋಷ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಚಯ್ಯ ಹಿರೇಮಠ ಉಪಸ್ಥಿತರಿದ್ದರು.