ಚಿಕ್ಕೋಡಿ ಲೋಕಸಭಾ : ಮತ ಎಣಿಕಾ ಕೇಂದ್ರಕ್ಕೆ ಡಿಸಿ. ನೀತಿಶ್ ಪಾಟೀಲ ಭೇಟಿ ಪರಿಶೀಲನೆ

ಅಥಣಿ /ಚಿಕ್ಕೋಡಿ :ಮಾ.29: ಲೋಕಸಭಾ ಸಾರ್ವತ್ರಿಕ ಚುನಾವಣೆ -2024ಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯ ಆರ್.ಡಿ. ಹೈಸ್ಕೂಲಿನ ಮತ ಏಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ನೀತಿಶ್ ಪಾಟೀಲ ಅವರು ಗುರುವಾರ (ಮಾ.28)ದಂದು ಭೇಟಿ ನೀಡಿ ಪರಿಶೀಲಿಸಿದರು.

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತ ಏಣಿಕೆ ಕೇಂದ್ರದಲ್ಲಿನ ವಿಧಾನ ಸಭಾ ಕ್ಷೇತ್ರವಾರು ಸ್ಟ್ರಾಂಗ್ ರೂಂಗಳಿಗೆ ಒದಗಿಸಲಾದ ಭದ್ರತೆ ಹಾಗೂ ಮತ ಏಣಿಕೆ ಕೊಠಡಿಗಳನ್ನು ಪರಿಶೀಲಿಸಿದ ಅವರು ಸುಗಮ, ಶಾಂತಿಯುತ ಹಾಗೂ ವ್ಯವಸ್ಥಿತ ಮತ ಏಣಿಕೆಗೆ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ, ಜಿಲ್ಲಾ ಪೆÇಲಿಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿ.ಪಂ. ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಶ್ರೀಮತಿ ಮೆಹಬೂಬಿ. ತಹಶೀಲ್ದಾರ ಚಿದಂಬರ ಕುಲಕರ್ಣಿ, ಸಿ.ಪಿ.ಆಯ್. ಗೋಪಾಲಕೃಷ್ಣ ಗೌಡರ, ತಾ.ಪಂ. ಇ.ಓ. ಜಗದೀಶ ಕಮ್ಮಾರ, ಪೆÇೀಲಿಸ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.