ಚಿಕ್ಕಲ್ಲೂರೂ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಯಶಸ್ವಿ

ಹನೂರು ಜ.13:- ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರ, ಚಾಮರಾಜನಗರ ಜಿಲ್ಲಾಡಳಿತ ಕಂದಾಯ ಮತ್ತು ಪೆÇಲೀಸ್ ಇಲಾಖೆಯು ಚಾ. ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ಬಲಿ ತಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಜ.05 ರಿಂದ 10ರ ವರೆಗೆ ಜರುಗಿದ ಈ ಜಾತ್ರೆಯಲ್ಲಿ ಶ್ರೀ ಸಿದ್ದಪ್ಪಾಜಿಯ ಹಳೆ ಮಠ ಮತ್ತು ಹೊಸ ಮಠ – ದೇವಾಲಯದ ಆವರಣ, ಧಾರ್ಮಿಕ ಪರಿಸರ, ಸಮಾವೇಶ, ಮೆರವಣಿಗೆ, ಅಕ್ಕಪಕ್ಕದ ಜಮೀನು, ಕಟ್ಟಡಗಳಲ್ಲಿ ಎಲ್ಲಿಯೂ ಯಾವುದೇ ಪ್ರಾಣಿಗಳ ಹತ್ಯೆ-ಬಲಿ ಆಗದಂತೆ ಸುಮಾರು 15 ದಿನಗಳಿಂದಲೇ ವ್ಯಾಪಕ ಪ್ರಚಾರ ಕೈಗೊಂಡಿತ್ತು.
ಜಿಲ್ಲಾಡಳಿತವು ಸುಮಾರು ಐದಾರು ದಿನಗಳಿಂದಲೇ ಜಾತ್ರೆಯಿಂದ 15-20 ಕಿಮೀ ದೂರದಲ್ಲಿ ಜಾತ್ರೆಗೆ ಬರುವ ಎಲ್ಲಾ ರಸ್ತೆಗಳಲ್ಲಿ ಪೆÇಲೀಸ್ ಚೆಕ್ ಪೆÇೀಸ್ಟ್ ಗಳನ್ನ ನಿರ್ಮಿಸಿ ಬಿಗಿ ಬಂದೋಬಸ್ತ್ ಮಾಡಿ, ಆಡು, ಕುರಿ, ಕೋಳಿ ಮುಂತಾದ ಯಾವುದೇ ಪ್ರಾಣಿಗಳನ್ನು ಜಾತ್ರೆಗೆ ತೆಗೆದುಕೊಂಡು ಹೋಗದಂತೆ ತಡೆದಿದ್ದು ಅಲ್ಲದೇ ಜಾತ್ರಾ ಪರಿಸರದಲ್ಲಿ ಇವುಗಳ ಮಾರಾಟಕೂ ಕೂಡ ಅವಕಾಶವನ್ನು ನೀಡಿರಲಿಲ್ಲ.
ಜಾತ್ರೆಗೆ ಬರುವ ಎಲ್ಲಾ ರಸ್ತೆಗಳಲ್ಲಿ ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧದ ಕುರಿತಾದ ಬಿತ್ತಿ ಪತ್ರಗಳನ್ನು, ಫಲಕಗಳನ್ನು ಹಾಕಿಸಿ ದ್ವನಿವರ್ಧಕದ ಮೂಲಕ ಎಲ್ಲೆಡೆಯೂ ಪ್ರಚಾರ ಮಾಡಿಸಿತ್ತು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು – ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಮತ್ತು ಬಸವಧರ್ಮ ಜ್ಞಾನಪೀಠದ ಅದ್ಯಕ್ಷರು ಆದ ಶ್ರೀ ದಯಾನಂದ ಸ್ವಾಮೀಜಿ, ಕಾರ್ಯದರ್ಶಿ ಭರತ್ ಸೇನ್ ಕುಮಾರ್, ಸಂಚಾಲಕಿ ಆಶಾ ಭಾರ್ಗವ ಮತ್ತು ಅವರ ತಂಡ ಚಾ. ನಗರ, ಸಂತೆ ಮಾರಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು, ಚಿಕ್ಕಲ್ಲೂರು ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಪ್ರಾಣಿಬಲಿ ತಡೆ ಕುರಿತು ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆಯ ಮೂಲಕ ಜಾಗೃತಿ ಮೂಡಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪಶು ಸಂಗೋಪನಾ ಇಲಾಖೆ ಕಾಯದರ್ಶಿಗಳು, ಪೆÇೀಲಿಸ್ ಮಹನಿರ್ದೇಶಕರು (ಡಿಜಿಪಿ &. ಐಜಿಪಿ ಐ&ಔ) ಗಳ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾ ಡಿಸಿ ಮತ್ತು ಎಸ್ಪಿ ಯವರುಗಳ ಮಾರ್ಗದರ್ಶನದಲ್ಲಿ
ಹೆಚ್ಚುವರಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಧಿಕಾರಿ , ಪಶು ಸಂಗೋಪನಾ ಉಪ ನಿರ್ದಶಕರು, ಚಾಮರಾಜನಗರ ಹಾಗೂ ಕೊಳ್ಳೇಗಾಲ ಉಪವಿಭಾಗದ ಡಿ.ವೈ.ಎಸ್.ಪಿ ಯವರು,ತಾಲ್ಲೋಕು ದಂಡಧಿಕಾರಿ, ಕೊಳ್ಳೇಗಾಲ ತಾಲ್ಲೂಕು ತಹಶಿಲ್ದಾರ್ ಎಂ.ಮಂಜುಳರವರು , ಸಿ.ಪಿ.ಐ ಹಾಗೂ ಪಿ.ಎಸ್.ಐ ರವರುಗಳ ನೇತೃತ್ವದಲ್ಲಿ ಕಂದಾಯ, ಪಶು ಸಂಗೋಪನೆ, ಪಂಚಾಯತ್ ಮುಂತಾದ ಇಲಾಖಾಧಿಕಾರಿಗಳ ಮತ್ತು ಸುಮಾರು ಸಾವಿರಕ್ಕೂ ಹೆಚ್ಚು ಪೆÇಲೀಸ್ ಹಾಗೂ ಹೋಂ ಗಾರ್ಡ್ ಪಡೆ ಸಂಯುಕ್ತವಾಗಿ 6 ದಿನಗಳ ಕಾಲ ಹಗಲು ರಾತ್ರಿ ಕಾರ್ಯ ನಿರ್ವಹಿಸಿ ಪ್ರಾಣಿಗಳ ಬಲಿ ಜೊತೆಗೆ ಜಾತ್ರೆಗೆ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದನ್ನು ಕೂಡ ತೆಡೆಯುವುದರ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷವೂ ಕೂಡ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಬಲಿ ತಡೆದು ಕರ್ನಾಟಕದ ಹೈ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದೆ.
ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಭಕ್ತರು ಪಂಕ್ತಿ ಸೇವೆ ಸಲ್ಲಿಸುವಂತೆ ಮಾಡಿದೆ, ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರದ ಕಾರ್ಯಕೌಶಲ್ಯಕ್ಕೆ, ಪರಿಶ್ರಮಕ್ಕೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು, ಈ ಪ್ರಾಣಿಬಲಿ ತಡೆಗೆ ಸಹಕರಿಸಿದ ಸುದ್ದಿ ಮಾಧ್ಯಮಗಳು, ಭಕ್ತರು, ಜಾತ್ರಾ ಸಮಿತಿ, ದೇವಾಲಯದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.