ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜೀ ಚಂದ್ರಮಂಡಲಕ್ಕೆ ಅಗ್ನಿಸ್ಪರ್ಶ

ಸಂಜೆವಾಣಿ ವಾರ್ತೆ
ಹನೂರು: ಜ.26:- ಸುತ್ತೇಏಳು ಗ್ರಾಮಸ್ಥರಿಂದ ಜರುಗಿದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಚಂದ್ರಮಂಡಲೋತ್ಸವವೂ ಗುರುವಾರ ರಾತ್ರಿ 11.20ರ ಸಮಯದಲ್ಲಿ ವಿಬೃಂಜಣೆಯಿಂದ ಚಂದ್ರಮಂಡಲೋತ್ಸವ ಜರುಗಿತು.
ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರು ದೇವಸ್ಥಾನ ಮುಂಭಾಗ ಶಾಗ್ಯ ಗ್ರಾಮದವರು ಸಿದ್ಧಪಡಿದ ಚಂದ್ರಮಂಡಲಕ್ಕೆ ಬಿ.ಎಸ್.ಜ್ಞಾನನಂದ ಚೆನ್ನರಾಜೇ ಅರಸ್ ಸ್ವಾಮಿಗಳ ಸಂಸ್ಥಾನದಿಂದ ಶ್ರೀ ಶುಭಕೃತು ಸಂವತ್ಸರದಲ್ಲಿ ಕರ್ಪೂರದ ಆರತಿ ಬೆಳಗಿ ಅಗ್ನಿ ಸ್ಪರ್ಶಿಸಿದರು. ಈ ವೇಳೆ ನೆರೆದಿದ್ದ ಲಕ್ಷಾಂತರ ಜನರು ಮಂಟೇಸ್ವಾಮಿ, ಸಿದ್ದಪ್ಪಾಜಿ ಪಾದಕ್ಕೆ ಉಘೇ ಎಂದು ಜಯಘೋಷ ಹಾಕಿದರು.
ಚಂದ್ರಮಂಡಲವು ಉತ್ತರ ದಿಕ್ಕಿಗೆ ವಾಲಿ ಹೆಚ್ಚು ಉರಿದಿದೆ ಈ ಭಾರಿ ಉತ್ತಮ ಮಳೆಯಾಗಲಿದೆ. ರೈತರು ಬೆಳೆದ ಫಸಲು ಸಮೃದ್ದಿಯಾಗಲಿದೆ ಎಂಬದು ನಂಬಿಕೆ ಹೀಗಾಗಿ ಧವಸ ಧಾನ್ಯಗಳಾದ ಎಳ್ಳು, ರಾಗಿ ಸೇರಿದಂತೆ ಹಾಗೂ ನಾಣ್ಯ, ಹೂವುಗಳ ನ್ನು ಚಂದ್ರಮಂಡಲಕ್ಕೆ ಎಸೆದು ತಮ್ಮ ಇಸ್ಟಾರ್ಥವನ್ನು ಸಲ್ಲಿಸಿದರು.ಚಂದ್ರಮಂಡಲ ಮುಗಿದ ಬಳಿಕ ಕಪ್ಪು-ಧೂಳತವನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದರು.
ಇದಕ್ಕೂ ಮುನ್ನ ಮಠಾಧೀಪತಿಯವರು ವಾದ್ಯತಮಟೆ ಸದ್ದಿನೊಂದಿಗೆ ಆಗಮಿಸಿದರು ನಂತರ ಚಂದ್ರಮಂಡಲದ ಸುತ್ತ ಪ್ರದಕ್ಷಣೆ ಹಾಕಿ ಬಳಿಕ ಚಂದ್ರಮಂಡಲಕ್ಕೆ ವಿಶೇಷ ಪೂಜೆ ಮಾಡಿದರು. ಮೊದಲ ದಿನ ಚಂದ್ರಮಂಡಲ ನಿರ್ಮಾಣ ಮಾಡಲು ತೆಳ್ಳನೂರು, ಇಕ್ಕಡಹಳ್ಳಿ ಹಾಗೂ ಇರಿದಾಳ ಸುಂಡ್ರಳ್ಳಿ ಹಾಗೂ ಬಾಣೂರು ಹಾಗೂ ಬಾಳಗುಣಸೆ ಗ್ರಾಮಸ್ಥರು ಒಂದೊಂದು ಸಾಮಗ್ರಿಯನ್ನು ಶಾಗ್ಯ ಗ್ರಾಮದ ತಂಡಕ್ಕೆ ನೀಡಿದ್ದರು.ಜ.26ರಂದು ಹುಲಿವಾಹನತ್ಸವ ನಡೆಯಲಿದೆ.
ದೇವಾಲಯದಲ್ಲಿ ವಿದ್ಯುತ್ ಸಿಂಗರಿಸಲಾಗಿ ಕಂಗೊಳಿಸುವಂತೆ ಮಾಡಿಲಾಗಿತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬಾರಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ಹುಲಿ ವಾಹನೋತ್ಸವ:
ಇಂದು ರಾತ್ರಿ 7ಗಂಟೆ ಬಳಿಕ ದೇವಾಸ್ಥಾನ ಆವರಣದಲ್ಲಿ ಹುಲಿ ವಾಹನೋತ್ಸವ ಜರುಗಲಿದೆ.
ಹುಲಿವಾಹನವನ್ನು ಹೆಗಲ ಮೇಲೆ ಹೊತ್ತು ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿ ಶ್ರದ್ಧೆಯಿಂದ ಸೇವೆ ನರೆವೇರಿಸಲಿದ್ದಾರೆ.