ಚಿಕ್ಕಲ್ಲೂರು ಜಾತ್ರೆ: ಚಂದ್ರ ಮಂಡಲೋತ್ಸವ

ಸಂಜೆವಾಣಿ ವಾರ್ತೆ
ಹನೂರು ಜ.25:- ಚಿಕ್ಕಲ್ಲೂರು ಜಾತ್ರೆ ಸಹಸ್ರಾರು ಜನರ ಸಮ್ಮುಖದಲ್ಲಿ ಚಂದ್ರಮಂಡಲೋತ್ಸವ ಇಂದು ತಡರಾತ್ರಿ ವಿಬೃಂಜಣೆಯಿಂದ ಜರುಗಲಿದೆ.
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಐದು ದಿನಗಳ ಕಾಲ ಜರುಗುವ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನ ಚಂದ್ರಮಂಡಲೋತ್ಸಕ್ಕೆ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠಧೀಪತಿಯವರು ಚಂದ್ರಮಂಡಲೋತ್ಸವಕ್ಕೆ ಅಗ್ನಿ ಸ್ವರ್ಶ ಮಾಡಲಿದ್ದಾರೆ.
ಇದಕ್ಕೂ ಮುನ್ನ ಹಳೆ ಮಠದಿಂದ ಮಠಧೀಪತಿಯವರು ಕಂಡಾಯ ಸೇರಿದಂತೆ ಸತ್ತಿಗೆ, ಸುರಪಾನಿ, ವಾದ್ಯ ತಮಟೆ ಸದ್ದಿನೊಂದಿಗೆ ಮೆರವಣಿಗೆ ಹೊರಟು ಸಿದ್ದಪ್ಪಾಜಿ ಗದ್ದುಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.ನಂತರ ಗದ್ದುಗೆಯ ಮುಂಭಾಗ ಸುತ್ತೆಳು ಬಾಬತ್ತುನಲ್ಲಿ ಸಿದ್ಧಪಡಿದ ಚಂದ್ರಮಂಡಲಕ್ಕೆ ಆರತಿ ಬೆಳಗಿ ಪೂಜಾ ಅಗ್ನಿ ಸ್ಪರ್ಶಿಸುತ್ತಾರೆ. ಅಗ್ನಿಯು ಯಾವ ದಿಕ್ಕಿಗೆ ವಾಲುತ್ತಾದ್ದೋ ಅ ದಿಕ್ಕಿನಲ್ಲಿ ಹೆಚ್ಚು ಮಳೆ ಬೆಳೆ ಆಗಲಿದೆ ಎಂಬುದು ವಾಡಿಕೆ. ಈ ವೇಳೆ ಸಿದ್ದಪ್ಪಾಜಿ ನೀಲಗಾರರು ನೆರೆದಿದ್ದ ಜನರು ಮಂಟೇಸ್ವಾಮಿ ಸಿದ್ದಪ್ಪಾಜಿ ಗೆ ಜಯಘೋಷ ಮೊಳಗಿಸಲಿದ್ದಾರೆ. ಅಲ್ಲದೆ ಚಂದ್ರಮಂಡಲಕ್ಕೆ ಹಣ್ಣು ಹೂ ದವಸ ದಾನ್ಯ ಎಸೆದು ಹರಕೆ ತೀರಿಸಲಿದ್ದಾರೆ.
ಈ ಜಾತ್ರೆಯ ಮೊದಲ ದಿನ ಜರುಗಿದ ಚಂದ್ರಮಂಡಲೋತ್ಸವನ್ನು ನೋಡಲು ರಾಜ್ಯದ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.