ಚಿಕ್ಕರಾಯಕುಂಪಿ:ಶಿಕ್ಷಕಿ ಹತ್ತು ವರ್ಷ ಮೌಖಿಕ ರಜೆ

ಗಬ್ಬೂರು.ನ.೨೩-ದೇವದುರ್ಗ ತಾಲೂಕಿನ ಗೂಗಲ್ ಕ್ಲಸ್ಟರ್ ವ್ಯಾಪ್ತಿಗೆ ಬರುವ ಚಿಕ್ಕರಾಯಕುಂಪಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ರೂಬಿನಾ ತುಬಸಮ್ ಅವರು ಹತ್ತು ವರ್ಷಗಳ ಕಾಲ ಮೌಖಿಕವಾಗಿ ಗೈರು ಹಾಜರು ಆಗಿದ್ದಾರೆ, ಎಂದು ಅದೇ ಶಾಲೆಯ ಮುಖ್ಯ ಶಿಕ್ಷಕಿಯಾದ ರಾಜೇಶ್ವರಿ ಅವರು ರೈಟಿಂಗ್ ದಲ್ಲಿ ಆರ್ ಟಿಐ ಕಾರ್ಯಕ್ರರ್ತನಾದ ರಂಗಪ್ಪ ಅವರಿಗೆ ಹಿಂಬರಹ ಕೊಟ್ಟಿದ್ದಾರೆ.
ಮಾಹತಿ ಹಕ್ಕು ಅಧಿನಿಯಮ ೨೦೦೫(೧)ಮತ್ತು೭ (೧)ನೇ ಪ್ರಕರಣ ಅಡಿಯಲ್ಲಿ ರೂಬಿನಾ ತುಬಸಮ್ ಶಿಕ್ಷಕಿಯ ಹಾಜರಾತಿ,ಪೇಮೆಂಟ್ ಡಿಟೆಲ್ಸ್ ಮಾಹಿತಿ ಹಕ್ಕಿನಲ್ಲಿ ರಂಗಪ್ಪ ಅವರು ಮಾಹಿತಿ ಕೇಳಿದ್ದಾರೆ.
ಈ ವಿಚಾರವಾಗಿ ಕ್ಷೇತ್ರಶಿಕ್ಷಣಾಧಿಕಾರಿಯಾದ ಶ್ರೀಮತಿ ಆರ್ ಇಂದಿರಾ ಅವರನ್ನು ಪೋನು ಕರೆ ಮಾಡಿ ಕೇಳಿದರೆ ಮೌಖಿಕವಾಗಿ ರಜೆ ಕೊಡಲು ಬರುವುದಿಲ್ಲ ಎಂದು ನೇರವಾಗಿ ಹೇಳಿದರು.ಆದರೆ ಮುಖ್ಯ ಶಿಕ್ಷಕಿಯಾದ ರಾಜೇಶ್ವರಿ ಅವರು ಕ್ಷೇತ್ರಶಿಕ್ಷಣಾಧಿಕಾರಿ ಅವರು ಹೇಳಿದಾಗೆ ಬರೆದು ಕೊಟ್ಟಿದ್ದೇನೆ ಎಂದು ಹೇಳುತ್ತಾರೆ.
ಹತ್ತು ವರ್ಷಗಳ ಕಾಲ ಮೌಖಿಕವಾಗಿ ರಜೆ ಕೊಟ್ಟಿದ್ದಾರೆ ಎಂದು ಉಡಾಫೆ ಉತ್ತರ ನೀಡಿದ,ದುಷ್ಟ ಮುಖ್ಯ ಶಿಕ್ಷಕಿಯ ರಾಜೇಶ್ವರಿ ಮೇಲೆ ಕೂಡಲೇ ಮೇಲಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಆರ್ ಟಿಐ ಕಾರ್ಯಕರ್ತನಾದ ರಂಗಪ್ಪ ಅವರು ಗಂಭೀರವಾಗಿ ಆರೋಪಿಸಿದ್ದಾರೆ.