ಚಿಕ್ಕಮ್ಮನಿಂದಲೆ ಅಕ್ಕನ ಮಗನ ಕೊಲೆ

ದೇವದುರ್ಗ,ಮಾ.೦೨- ಚಿಕ್ಕಮ್ಮನಿಂದಲೇ ಅಕ್ಕನ ಮಗ ಕೊಲೆಯಾದ ಘಟನೆ ಜಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ವಿನೋದ ಶಿವರಾಜ (೯) ಕೊಲೆಯಾದ ಬಾಲಕ. ತಾಯಿ ಗಂಗಮ್ಮ ನೀಡಿದ ದೂರು ಹಿನ್ನೆಲೆ ಕೊಲೆ ಆರೋಪಿ ರೇಣುಕಾಳನ್ನು ಬಂಧಿಸಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಕೊಲೆಯಾದ ವಿನೋದ ತಂದೆ ಶಿವರಾಜ ಸೊಸೆ ರೇಣುಕಾ ಅವರನ್ನು ಒಂದು ವರ್ಷದಿಂದೆ ಲಿಂಗಸೂಗೂರು ತಾಲೂಕಿನ ಪುಲ್ಲಬಾಯಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು. ಸಂಸಾರದಲ್ಲಿ ವಿನಾಕಾರಣ ತೊಂದರೆ ಉಂಟಾಗುತ್ತಿದ್ದರಿಂದ ಮನಸ್ಸಿಲ್ಲದ್ದಿರು ಮಾಮ ಮದುವೆ ಮಾಡಿಕೊಟ್ಟಿದ್ದರು ಎನ್ನುವ ಕಾರಣಕ್ಕೆ ಮಾವನ ಮಗ ವಿನೋದನ್ನು ಕೊಲೆ ಮಾಡಿದ್ದೇನೆ ಎಂದು ಆರೋಪಿ ರೇಣುಕಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.