ಚಿಕ್ಕಮಕ್ಕಳ ಮುಂದಿಟ್ಟು ಸಮಯ ಕೇಳಿದ ಪ್ರಿಯಾಂಕ

ಬೆಂಗಳೂರು,ಅ. ೨೮-ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಕರಣದ ಆರನೇ ಆರೋಪಿ ಆದಿತ್ಯಾ ಆಳ್ವ ಸಹೋದರಿ ಪ್ರಿಯಾಂಕ ಆಳ್ವ ಸಿಸಿಬಿಯ ವಿಚಾರಣೆ ಎದುರಿಸಲು ಸಮಯಾವಕಾಶ ಕೋರಿದ್ದಾರೆ.
ನಗರದ ಚಾಮರಾಜಪೇಟೆ ಬಳಿಯ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಎರಡು ಬಾರಿ ಪ್ರಿಯಾಂಕ ಆಳ್ವಗೆ ನೋಟಿಸ್ ನೀಡಿದ್ದರು. ಎರಡು ಬಾರಿಯೂ ವಿಚಾರಣೆಗೆ ಗೈರಾಗಿದ್ದ ಪ್ರಿಯಾಂಕಾ ಅವರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇಮೇಲ್ ಕಳುಹಿಸಿ ಸಮಯಾವಕಾಶ ಕೇಳಿದ್ದಾರೆ
ನನಗೆ ಎರಡು ಪುಟ್ಟ ಮಕ್ಕಳಿದ್ದಾರೆ. ಅವರನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರಬೇಕಾಗುತ್ತದೆ ಅದ್ದರಿಂದ
ನನಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ
ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುರಿಂದ ಮುಂಬೈನಿಂದ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ದಿನದ ಬಳಿಕ ನಾನು ವಿಚಾರಣೆಗೆ ಹಾಜರಾಗಿ, ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುವೆ ಎಂದು ಪ್ರಿಯಾಂಕ ಇಮೇಲ್ ನಲ್ಲಿ ಸಂದೀಪ್ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.