ಚಿಕ್ಕಮಕ್ಕಳಿಗೆ ಆರೋಗ್ಯ ಕಿಟ್ ವಿತರಣೆ

ಬಾಗಲಕೋಟೆ,ಜೂ.8 : ನಗರದ ವಿದ್ಯಾಗಿರಿ ಬಡಾವಣೆಯ ಮನೆಗೆಲಸ ಮಾಡುವ ಜನರ ಚಿಕ್ಕ ಮಕ್ಕಳಿಗೆ ಆರೋಗ್ಯ ಕಿಟ್ ಗಳನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಮೇಟಿ ವಿತರಿಸಿದರು.
ಮಕ್ಕಳ ಮಾಸ್ಕ್, ಸ್ಯಾನಿಟೈಸರ್, ಹಾಲಿನ ಪಾಕೆಟ್, ವಿಟಮಿನ್ ಸಿ ಟ್ಯಾಬ್ಲೆಟ್, ಕೆಮ್ಮಿನ ಔಷಧಿ, ಮಲ್ಟಿ ವಿಟಮಿನ್ ಸಿರಪ್ ಮತ್ತು ಬಿಸ್ಕತನ್ನು ಒಳಗೊಂಡಿದೆ ಎಂದರು. ಚಿಕ್ಕ ಮಕ್ಕಳು ದೇವರ ಸಮ ಅವರ ಆರೋಗ್ಯ ಕಾಪಾಡುವುದು ಪ್ರತಿಪಾಲಕರ ಜವಾಬ್ದಾರಿ ಈ ಕೋವಿಡ್ ಅಲೆ ತುಂಬಾ ಕ್ರೂರಿಯಾಗಿದೆ ಮಕ್ಕಳನ್ನು ಹೊರಗಡೆ ಬಿಡದಂತೆ ಪಾಲಕರಿಗೆ ತಿಳುವಳಿಕೆ ನೀಡುವ ಮೂಲಕ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ನಗರ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ನ್ಯಾಮಗೌಡರ, ಕಲಾವತಿ ಕಮತರ ಮತ್ತು ಜಯಶ್ರೀ ಗುಳಬಾಳ ಉಪಸ್ಥಿತರಿದ್ದರು.