ಚಿಕ್ಕಬಿದರಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ 

ಹರಿಹರ.ಏ.13;  ಈ ಹಿಂದೆಯೇ ಗ್ರಾಮಸ್ಥರು ಹತ್ತಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ  ಮನವಿ ಮಾಡಿದ್ದರು. ಸ್ಪಂದಿಸದ ಅಧಿಕಾರಿಗಳು ಜನ ಪ್ರತಿನಿಧಿಗಳ ವಿರುದ್ಧ ಚಿಕ್ಕಬಿದರಿ, ಸಾರಥಿ ಗ್ರಾಮಸ್ಥರು ಈ ಬಾರಿ ಚುನಾವಣೆಯಲ್ಲಿ ಮತ ಬಹಿಷ್ಕರಿಸುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು ವಿಷಯ ತಿಳಿಯುತ್ತಿದ್ದಂತೆ ಹರಿಹರ ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿ ತಹಸಿಲ್ದಾರ್ ಪಿಡಬ್ಲ್ಯೂಡಿ ಇತರೆ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದರು ಗ್ರಾಮಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟ ಗ್ರಾಮಸ್ಥರು, ಸಾರಥಿ. ಚಿಕ್ಕಬಿದರಿ  ಗ್ರಾಮದ ಸಂಪರ್ಕ ಸೇತುವೆ ರಸ್ತೆ,  ಇಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಟ   ಗ್ರಾಮಗಳ  ಸಮೀಪದ ಕಾರ್ಖಾನೆಯಿಂದ ದುರ್ವಾಸನೆ ಧೂಳು ಪರಿಸರ ಹಾಳಾಗುತ್ತಿದೆ  ಸಾಂಕ್ರಾಮಿಕ ರೋಗಗಳು ಹರಡುತ್ತಿದೆ ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ  ಗ್ರಾಮಸ್ಥರ ಬೇಡಿಕೆಗೆ ಜನಪ್ರತಿನಿಧಿಗಳು ಅಧಿಕಾರಿಗಳು   ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ  ಕಿಡಿಕಾರಿದರು.ಚುನಾವಣೆ ಅಧಿಕಾರಿ ಉದಯ ವಿ ಕುಂಬಾರ್.ಮಾತನಾಡಿ ಗ್ರಾಮಸ್ಥರು ಮತ ಚಲಾಯಿಸದಿದ್ದರೆ ಚುನಾಯಿತರಾದವರಿಗೆ ತಮ್ಮ ಸಮಸ್ಯೆಯನ್ನು ಕೇಳುವ ನೈತಿಕ ಹಕ್ಕು ಇರುವುದಿಲ್ಲ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ಸದೃಢ ಭಾರತ ನಿರ್ಮಾಣ ಮಾಡುವುದಕ್ಕೆ ತಾವೆಲ್ಲರೂ ಕಂಕಣ ಭಕ್ತರಾಗಬೇಕೆಂದು ಗ್ರಾಮಸ್ಥರ ಮಾನವಲಿಸಲು ಮುಂದಾದರು   ತಹಸಿಲ್ದಾರ್ ಪೃಥ್ವಿ ಸಾನಿಕಂ  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿ ಎನ್. ಪಿಡಬ್ಲ್ಯೂಡಿ ಅಧಿಕಾರಿ ಶಿವಮೂರ್ತಿ. ರಾಜಸ್ವಾನಿರಕ್ಷಕ ಮಂಜುನಾಥ್ ಸೇರಿದಂತೆ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಇದ್ದರು.