ಚಿಕ್ಕಬಳ್ಳಾಪುರ ೪ ಸಾವಿರ ಗಡಿದಾಟಿದ ಸೋಂಕಿತರು

ಚಿಕ್ಕಬಳ್ಳಾಪುರ, ಮೇ ೧- ರಾಜ್ಯದ ಗಡಿ ಅಂಚಿನ ಜಿಲ್ಲೆ ಎನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕಿದ್ದು ಇದೀಗ ಸಕ್ರಿಯ ಪಾಸಿಟಿವ್ ಸೋಂಕಿತರ ಸಂಖ್ಯೆ ೪ಸಾವಿರ ದಾಟಿದೆ .
ಜಿಲ್ಲಾಡಳಿತ ನಗರಸಭೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಕೊರೊನಾ ವೈರಾಣು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಹತ್ತು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ದುರಾದೃಷ್ಟ ಎಂದರೆ ನಾಗರಿಕರಿಗೆ ಅವರ ಜೀವವನ್ನು ಉಳಿಸಿಕೊಳ್ಳುವ ಪ್ರಜ್ಞೆ ಇಲ್ಲದಿರುವುದು ಚಿಂತೆಗೀಡು ಮಾಡಿರುವ ವಿಷಯವಾಗಿದೆ .
ಕೊರೊನಾ ಮಹಾಮಾರಿ ರಾಜ್ಯದಲ್ಲಿ ಸೃಷ್ಟಿಸುತ್ತಿರುವ ಅವಾಂತರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿಗಳಲ್ಲಿ ಜನ ದಿನನಿತ್ಯ ನಡೆಯುತ್ತಿದ್ದರೂ ಸಹ ಕ್ಷಣಕ್ಷಣದ ಸುದ್ದಿಗಳನ್ನು ಪರಿಸ್ಥಿತಿಯ ಗಂಭೀರತೆಯ ಅರ್ಥವೇ ಜನರಿಗೆ ಇಲ್ಲದಂತಾಗಿರುವುದು ಸಾಮಾಜಿಕವಾಗಿ ತೀವ್ರ ಟೀಕೆಗೆ ಗುರಿಯಾಗಿರುವ ವಿಷಯವಾಗಿದೆ .
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಆದರೆ ಜನಸಾಮಾನ್ಯರು ಮಾಸ್ ಧರಿಸುವುದಾಗಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ ಸ್ಯಾನಿಟೈಸರ್ ಬಳಕೆ ಮಾಡುವುದಾಗಲಿ ಸಮರ್ಪಕವಾಗಿ ಯಾವುದನ್ನು ಜನಸಾಮಾನ್ಯರು ಬಹುತೇಕ ಮಂದಿ ಪಾಲಿಸದೆ ಇರುವುದು ದುಸ್ಥಿತಿಗೆ ಕಾರಣವಾಗಿರುವ ಅಂಶವಾಗಿದೆ .ಇಂದು ಬೆಳಗ್ಗೆ ನಗರದ ಹಿರಿಯ ಛಾಯಾಗ್ರಾಹಕ ಜಿ ಕೃಷ್ಣಾಚಾರಿ ನಗರಪ್ರದೇಶವನ್ನು ರೌಂಡ್ ಹಾಕಿದಾಗ ಕೊರೊನಾ ನಿಯಮ ಪಾಲನೆ ಮಾಡದ ನಾಗರಿಕರ ಚಿತ್ರಗಳನ್ನು ತಮ್ಮ ಕ್ಯಾಮೆರಾ ಸೆರೆಯಲ್ಲಿ ಮೂಡಿಸಿರುತ್ತಾರೆ.