ಮನುಷ್ಯರಲ್ಲಿ ಜಿಕಾ ವೈರಸ್ ಪತ್ತೆಯಿಲ್ಲ

ಬೆಂಗಳೂರು, ೫ನ೨: ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವೆಡೆ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಾಣಿಸಿಕೊಂಡಿದೆ. ಆದರೆ, ಮನುಷ್ಯರಲ್ಲಿ ಇದು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಕಾ ವೈರಸ್ ಬೇರೆ ನಿಫಾ ವೈರಸ್ ಬೇರೆ, ಜಿಕಾ ಬಗ್ಗೆ ಆತಂಕ ಬೇಡ, ಬಾಣಂತಿಯರು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಜಿಕಾ ವೈರಸ್
ಚಿಕ್ಕಬಳ್ಳಾಪುರದ ಕೆಲವೆಡೆ ಜಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ನೂತನವಾಗಿ ಸೊಳ್ಳೆಗಳಿಂದ ಹರಡುಬಹುದಾದ ದೀಪ ವೈರಸ್ ಪತ್ತೆ ಆಗಿದ್ದು ಈ ಬಗ್ಗೆ ದೀಪ ವೈರಸ್ ಅನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ಮಹೇಶ್ ರವರು ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಆರೋಗ್ಯ ಇಲಾಖೆಗೆ ಜಿಕ ವೈರಸ್ ಜಿಲ್ಲೆಯಲ್ಲಿ ಪ್ರವೇಶ ಮಾಡಿರುವ ಬಗ್ಗೆ ತಿಳಿದು ಬಂದ ತಕ್ಷಣ ಜಿಲ್ಲೆಯ ಐದು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೊಳ್ಳೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು ಈ ಪೈಕಿ ಶಿಡ್ಲಘಟ್ಟ ತಾಲೂಕಿನ ತಲಕಾಲ ಬೆಟ್ಟ ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹವಾದ ಸೊಳ್ಳೆಯಲ್ಲಿ ಚಿಕ್ಕ ವೈರಸ್ ಇರುವುದು ಮತ್ತೆ ಆಗಿದೆ ಎಂದರು.
ಜೀಕಾ ವೈರಸ್ ನಿಂದ ಆಗಬಹುದಾದ ತೊಂದರೆಗಳ ಬಗ್ಗೆ ತಿಳಿಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಜೀಕಾ ವೈರಸ್ ನಿಂದ ಮರಣ ಸಂಭವಿಸುವುದಿಲ್ಲ ಬದಲಾಗಿ ಈ ವೈರಸ್ ಡೆಂಗ್ಯೂ ಜ್ವರದಂತಹ ಕಾಯಿಲೆಗಳನ್ನು ಹರಡುತ್ತದೆ ವಿಶೇಷವಾಗಿ ಜೀಕಾ ವೈರಸ್ ನಿಂದ ಗರ್ಭಿಣಿ ಸ್ತ್ರೀಯರು ದೂರ ಇರಬೇಕು ಗರ್ಭಿಣಿಯರಿಗೆ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಬ್ರೂಣಕ್ಕೆ ಜೀವ ತೊಂದರೆ ಉಂಟು ಮಾಡುತ್ತದೆ ಈ ಕಾರಣದಿಂದ ಗರ್ಭಿಣಿಯರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಕೋರಿದರು. ಜಿಲ್ಲೆಯಾದ್ಯಂತ ಸೊಳ್ಳೆಗಳ ನಿಯಂತ್ರಣದ ಬಗ್ಗೆ ತೀವ್ರ ಕತ್ತೆಚರ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಸಾರ್ವಜನಿಕರು ಯಾವುದೇ ರೀತಿಯಲ್ಲೂ ಭಯಪಡಬಾರದೆಂದು ಅವರು ಕೋರಿದರು.