ಚಿಕ್ಕನೇರ್ತಿಯಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ: ಆರಿಫ್ ನದಾಫ್ ಪ್ರಥಮ

ಹುಬ್ಬಳ್ಳಿ, ನ 22- ಕುಟುಂಬ ಕಲ್ಯಾಣ ಇಲಾಖೆ,ಧಾರವಾಡ ಜಿಲ್ಲಾಡಳಿತ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋದಲ್ಲಿ ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಆರೋಗ್ಯವಂತ ಮಗುವಿನ ಬೆಳೆವಣಿಗೆ ಹಾಗೂ ಆರೋಗ್ಯದ ಕುರಿತು ಕೆಲವೊಂದು ಮಾನದಂಡದ ಆಧಾರದ ಮೇಲೆ ಆರೋಗ್ಯವಂತ ಮಗುವನ್ನು ಗುರುತಿಸಿ ಬಹುಮಾನ ವಿತರಣೆ ಮಾಡಲಾಯಿತು. ಚಿಕ್ಕನೇರ್ತಿ ಗ್ರಾಮದ ಅಮೀನಾಬಿ ಲಾಲಸಾಬ ನದಾಫ್ ದಂಪತಿಗಳ ಪುತ್ರ ಆರಿಫ್ ನದಾಫ್(09ತಿಂಗಳ) ಮೊದಲ ಬಹುಮಾನ ಪಡೆದುಕೊಂಡಿದ್ದು,ಇದೇ ಗ್ರಾಮದ ಇನ್ನೂ ಎರಡು ಮಕ್ಕಳು ದ್ವೀತಿಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.ಇನ್ನೂ ಪ್ರದರ್ಶನದಲ್ಲಿ ಆರು ತಿಂಗಳಿನಿಂದ ಒಂದು ವರ್ಷದ ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ವಹಿಸಬೇಕಾದ ಕಾಳಜಿ ಕುರಿತು ಡಾ.ಸಂಜನಾ ಬಗಲಿ,ಕಿರಿಯ ಆರೋಗ್ಯ ಸಹಾಯಕಿ ಗೀತಾ ಮಿಸ್ಕಿನ್ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಮಾಯಣ್ಣವರ,ನಿರ್ಮಲಾ ಸಂಶಿ,ಕಲ್ಲಮ್ಮ ಪಾಟೀಲ ಶೇಖವ್ವ ದೊಡ್ಡಮನಿ ದ್ಯಾಮಕ್ಕ ರೂಟ್ಟಿಗವಾಡ ಸೇರಿದಂತೆ ಇತರರು ಇದ್ದರು.