ಚಿಕ್ಕಜಂತಗಲನಲ್ಲಿ ಪುಷ್ಕರ ಮಹೋತ್ಸವಕ್ಕೆ ಶಾಸಕ ಬಸವರಾಜ್ ದಢೇಸೂಗೂರು ಚಾಲನೆ

•ನದಿಯಲ್ಲಿ ಪುಣ್ಯಸ್ಥಾನ ಮಾಡಿದ ಭಕ್ತರು
•ಪುರೋಹಿತರ ನೇತೃತ್ವದಲ್ಲಿ ಪೂಜೆ
•ಶ್ರೀ ನಾಗಭೂಷಣ ಸ್ವಾಮೀಜಿ

ಗಂಗಾವತಿ ನ.21: ತಾಲೂಕಿನ ಚಿಕ್ಕಜಂತಗಲ್ ಗ್ರಾಮದ ತುಂಗಭದ್ರಾ ನದಿಯಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜ್ ದಢೆಸೂಗೂರು ಅವರು ಪುಷ್ಕರ (ಪುಣ್ಯಸ್ಥಾನ) ಮಹೋತ್ಸವಕ್ಕೆ ಶುಕ್ರವಾರ ಮಧ್ಯಾಹ್ನ ಚಾಲನೆ ನೀಡಿದರು.
ಅಲ್ಲದೇ ನದಿಯ ದಡದಲ್ಲಿ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು.
ಹೆಬ್ಬಾಳ ಮಠದ ಶ್ರೀ ನಾಗಭೂಷಣ ಸ್ವಾಮೀಜಿ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದರು. ನಾನಾ ಗ್ರಾಮದಿಂದ ಆಗಮಿಸಿದ್ದ ಭಕ್ತರು ನದಿಯಲ್ಲಿ ಪುಣ್ಯಸ್ಥಾನ ಮಾಡಿ ಪುನೀತರಾದರು.
ತುಂಗಭದ್ರಾ ಪುಷ್ಕರಣ ಕುಂಭಮೇಳ ಸರ್ವಧರ್ಮ ಸಮಿತಿ ಆಶ್ರಯದಲ್ಲಿ ತುಂಗಭದ್ರಾ ಪುಷ್ಕರ ಕುಂಭಮೇಳ ಮಹೋತ್ಸವ ಆಯೋಜಿಸಿದ್ದು, ಶುಕ್ರವಾರದಿಂದ ಆರಂಭವಾಗಿರುವ ಈ ಮಹೋತ್ಸವ ಡಿ.1 ರವರೆಗೆ ನಡೆಯಲಿದೆ.