
ಚಾಮರಾಜನಗರ, ಮೇ. 11:- ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆಆರೋಪ ಮಾಡಿ ಮತದಾನ ಬಹಿಷÀ್ಕರಿಸಿದ್ದ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಭೇಟಿ ನೀಡಿ ನಂತರ ಮತದಾನ ಮಾಡಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಎಲಚೆಟ್ಟಿ ಗ್ರಾಮ 101 ಅರ್ಹ ಮತದಾರರನ್ನು ಹೊಂದಿದೆ. ಗ್ರಾಮಕ್ಕೆ ಸರಿಯಾದರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಅಸಮಾಧಾನಗೊಂಡು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ಗುಂಡ್ಲುಪೇಟೆ ತಹಶೀಲ್ದಾರ್ ಮಾತಿಗೂ ಬಗ್ಗದ ಗ್ರಾಮಸ್ಥರು ಸುಮಾರು 4 ಗಂಟೆಯಾದರು ಮತದಾನ ಮಾಡದೇ ಪಟ್ಟು ಹಿಡಿದು ಕುಳಿತಿದ್ದರು.
ಗುಂಡ್ಲುಪೇಟೆ ತಾಲೂಕಿನ ಚಿಕ್ಕಎಲಚೆಟ್ಟಿ ಗ್ರಾಮದಲ್ಲಿ ರಸ್ತೆ, ಬಸ್ ಸೌಕರ್ಯ ಸಮರ್ಪಕ ಇಲ್ಲವೆಂದು ಗ್ರಾಮಸ್ಥರು ಅಸಮಾಧಾನಗೊಂಡು ಮತದಾನದಿಂದ ಹಿಂದೆ ಉಳಿದಿದ್ದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿಜನರ ಸಮಸ್ಯೆಗಳನ್ನು ಸವಿವರವಾಗಿ ಆಲಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿಯವರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಮತದಾನಕ್ಕೆ ಗ್ರಾಮಸ್ಥರು ಮುಂದಾದರು. ಮತಗಟ್ಟೆಗೆ ತೆರಳಿ ಬಿರುಸಿನಿಂದ ಮತದಾನ ಮಾಡಿದರು.
ಮತಗಟ್ಟೆಯ ಮುಂದೆ ವಾಮಚಾರ:
ಹನೂರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಗೇಟಿನ ಮುಂಭಾಗ ವಾಮಾಚಾರ ಮಾಡಿರುವುದುತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 103, 104, 105 ಮೂರು ಬೂತ್‍ಗಳಿದು ಗೇಟಿನ ಮುಂಭಾಗ ಕಿಡಿಗೇಡಿಗಳು ಎರಡುಕುಡಿಕೆ ಹಾಗೂ ನಿಂಬೆಹಣ್ಣನ್ನು ಹೂತು ಹಾಕಿ, ಕಲ್ಲನ್ನು ಮುಚ್ಚಿ ಹಾಕಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೆÇಲೀಸ್ ವಾಹನ ಶಾಲೆಯೊಳಗೆ ತೆರಳಿದಾಗ ಕುಡಿಕೆಯ ಮೇಲಿದ್ದಕಲ್ಲುಜರುಗಿದ ಸಂದರ್ಭದಲ್ಲಿ ವಾಮಾಚಾರ ನಡೆಸಿರುವುದು ಕಂಡು ಬಂದಿದೆ.
ಹನೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜೀರಿಗೆಗದ್ದೆ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯ ಮತಗಟ್ಟೆಯಲ್ಲಿ ಜಿಲ್ಲೆಯ ಮತದಾನದ ಜಾಗೃತಿರಾಯ ಭಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸೋಲಿಗರ ಮಾದಮ್ಮ ಅವರು ಮತ ಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.