ಚಿಕಿತ್ಸೆ ಬಳಿಕ ಮತ್ತೆ ಜೈಲಿಗೆ ಪಾಷ

ಬೆಂಗಳೂರು,ನ.೯-ಆನಾರೋಗ್ಯಕ್ಕೆ ಒಳಗಾಗಿ ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಡ್ರಗ್ಸ್ ಜಾಲದ ಬಂಧಿತ ಆರೋಪಿ ಬಿಗ್ ಬಾಸ್ ಖ್ಯಾತಿಯ ಪಾಷನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಲಾಗಿದೆ.
ವಿಚಿತ್ರ ಸ್ವಭಾವದಿಂದ ಜೈಲಿಗೆ ಹೋಗುವಾಗಲೇ ಕಿರಿಕ್ ಮಾಡಿದ್ದ ಆಯಡಂಪಾಷನ ಆರೋಗ್ಯದಲ್ಲಿ ಕೆಲದಿನಗಳ ಹಿಂದೆ ಏರುಪೇರು ಉಂಟಾಗಿದ್ದು ಆತನನ್ನು ಚಿಕಿತ್ಸೆಗಾಗಿ ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿತ್ತು.
ಚಿಕಿತ್ಸೆ ಪಡೆದು ಗುಣಮುಖನಾದ ಆತನನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು ಆತನ ವಿಚಿತ್ರ ವರ್ತನೆಯಿಂದ ಬೇಸತ್ತಿರುವ ಜೈಲು ಅಧಿಕಾರಿ ಗಳು ಪ್ರತ್ಯೇಕ ಬ್ಯಾರಕ್ ವ್ಯವಸ್ಥೆ ಮಾಡಿದ್ದಾರೆ. ವಿಚಿತ್ರ ಬಟ್ಟೆ ಧರಿಸಿ ಮೇಕಪ್ ಮಾಡಿಕೊಂಡು ವಿಕೆಂಡ್ ಪಾರ್ಟಿ, ಡಾನ್ಸ್,ಮದ್ಯದ ನಶೆಯ ಲೋಕದಲ್ಲಿ ತೇಲಾಡುತ್ತಿದ್ದ ಆ?ಯಡಂ ಪಾಷ ಜೈಲಿನಲ್ಲಿ ಒದ್ದಾಡುತ್ತಿದ್ದಾನೆ.
ಸಿಗರೇಟ್,ಮದ್ಯ ಇನ್ನಿತರ ವಸ್ತುಗಳ ಬಳಕೆಗೆ ಅವಕಾಶ ಮಾಡಿಕೊಡಿ. ಸಿಗರೇಟ್ ಹಾಗೂ ಮದ್ಯ ಸೇವಿಸದಿದ್ದರೆ ನನ್ನ ದೇಹದಲ್ಲಿ ಏರುಪೇರು ಆಗಲಿದೆ ಎಂದು ನನಗೆ ಬೇಕಾದ ವಸ್ತುಗಳನ್ನು ತಂದು ಕೊಡಿ ಎಂದು ಹಠ ಹಿಡಿದ ಕಾರಣ ಮೊದಲು ಜೈಲಾಧಿಕಾರಿಗಳು ನೀವು ಒಬ್ಬ ವಿಚಾರಣಾಧೀನ ಕೈದಿ, ಜೈಲಿನ ನಿಯಮ ಕಾನೂನುಗಳ ಬಗ್ಗೆ ಅರಿವು ಇರಲಿ ಎಂದು ತಿಳಿಸಿದ್ದಾರೆ.
ಮತ್ತೆ ಹಠ ಮಾಡಿದಾಗ ಏರು ಧ್ವನಿಯಲ್ಲಿ ಎಚ್ಚರಿಕೆ ನೀಡಿ ಪ್ರತ್ಯೇಕ ಬ್ಯಾರಕ್?ನಲ್ಲಿ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಎನ್?ಸಿಬಿ ಯಿಂದ ಬಂಧಿತರಾದ ಅನಿಕಾ ಜೊತೆ ನಿರಂತರ ಪಾರ್ಟಿ, ಹೈಫೈ ಡ್ರಗ್ಸ್? ಖರೀದಿಸುತ್ತಿದ್ದ ಆ?ಯಡಂ ಪಾಷ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಾ ಇತರರನ್ನು ? ಡ್ರಗ್ಸ್ ಪಾರ್ಟಿ ಗಳಿಗೆ ಅಹ್ವಾನಿಸಿ ತಮ್ಮದೇ ಜಾಲ ಸೃಷ್ಟಿಸಿದ್ದ ಆರೋಪ ಎದುರಿಸುತ್ತಿದ್ದಾನೆ.