ಚಿಕಿತ್ಸೆಗೆ ಹೆಚ್ಚುವರಿಯಾಗಿ ಹಾಸಿಗೆಗಳ ಸೌಲಭ್ಯ

????????????????????????????????????

ಚಾಮರಾಜನಗರ, ಏ.27- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಮತ್ತಷ್ಟು ಕೋವಿಡ್ ಕೇಂದ್ರಗಳನ್ನು ತೆರೆಯಲಿದ್ದು ಇದರಿಂದ ಹೆಚ್ಚುವರಿಯಾಗಿ 970 ಹಾಸಿಗೆಗಳ ಸೌಲಭ್ಯ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾದಿಗಳು ನಗರದ ವೈದ್ಯಕೀಯ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರ ತೆರೆಯಲು ಪರಿಶೀಲಿಸಲಾಗಿದೆ. ಇನ್ನೂ ಎರಡು ವಾರಗಳಲ್ಲಿ ಕೋವಿಡ್ ಕೇರ್ ಕೇಂದ್ರಕ್ಕಾಗಿ ಎರಡು ಮಹಡಿಗಳನ್ನು ಪೂರ್ಣಗೊಳಿಸಿ ಬಿಟ್ಟುಕೊಡಲಾಗುತ್ತದೆ. ಅಲ್ಲಿಯವರೆಗೂ ಮೆಡಿಕಲ್ ಕಾಲೇಜಿನಲ್ಲಿರುವ ಆಡಿಟೋರಿಯಂ ಬಳಸಿಕೊಂಡು 150 ಹಾಸಿಗೆವುಳ್ಳ ಕೋವಿಡ್ ಕೇಂದ್ರ ಆರಂಭಿಸಲಿದ್ದೇವೆ ಎಂದರು.
ಅಲ್ಲದೇ ತಾಲೂಕುಗಳಲ್ಲಿರುವ ಹಾಸ್ಟೆಲ್, ವಸತಿ ಶಾಲೆಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹನೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಹಾಸಿಗೆ, ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 120 ಹಾಸಿಗೆ, ಗುಂಡ್ಲುಪೇಟೆಯ ವೀರನಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ 100 ಹಾಸಿಗೆ, ಚಾಮರಾಜನಗರ ತಾಲೂಕಿನ ಮಾದಪುರದ ಪ್ರಥಮ ದರ್ಜೆ ಕಾಲೇಜಿನ ಹಾಸ್ಟಲ್‍ನಲ್ಲಿ 40 ಹಾಸಿಗೆಗಳ ಸಾಮಥ್ರ್ಯದ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಈ ಎಲ್ಲಾ 970 ಹಾಸಿಗೆಗಳಿಗೆ ಶೇ. 50ರಷ್ಟು ಹಾಸಿಗೆಗಳಿಗೆ ಅಂದರೆ ಸುಮಾರು 450 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ ಅಳವಡಿಸಲು ತೀರ್ಮಾನಿಸಲಾಗಿದೆ. ವಾತಾವರಣದಲ್ಲಿನ ಆಮ್ಲಜನಕ ಬಳಸಿಕೊಂಡು ಸುಮಾರು 40 ರಿಂದ 50 ಜಂಬೊ ಸಿಲಿಂಡರ್ ಸಮನಾಗಿರುವ ಆಕ್ಸಿಜನ್ ಪೂರೈಸಬಹದು. ಇದಕ್ಕಾಗಿ ಆಕ್ಸಿಜನ್ ಜನರೇಟರ್ ತಯಾರಿ ಮಾಡಲಾಗುತ್ತದೆ. 300 ಆಕ್ಸಿಜನ್ ಕಾನ್ಸ್‍ಟ್ರೇಟರ್‍ಗಳನ್ನು ಖರೀದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತೀ ಕಾನ್ಸ್‍ಟ್ರೇಟರ್ 6 ರಿಂದ 7 ಲೀಟರ್ ಆಕ್ಸಿಜನ್ ತಯಾರಿಸುತ್ತದೆ. ಈ ಆಮ್ಲಜನಕವನ್ನು 450 ಹಾಸಿಗೆಗಳಿಗೆ ಬಳಸಲು ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈವರೆಗೂ ಜಿಲ್ಲೆಯಲ್ಲಿ 2,255 ಪ್ರಕರಣಗಳು ದಾಖಲಾಗಿದ್ದು ಇದು ಕಳೆದ 24 ರಿಂದ 25 ದಿನಗಳಲ್ಲಿ ಕಂಡು ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಕಳೆದ ಐದಾರು ದಿನಗಳಿಂದ ಪ್ರತಿದಿನ ಪ್ರಕರಣಗಳ ಸಂಖ್ಯೆ 250ಕ್ಕಿಂತ ಕಡಿಮೆಯಾಗಿಲ್ಲ. ಒಟ್ಟು ಪ್ರಕರಣಗಳ ಪೈಕಿ 1697 ಪ್ರಕರಣಗಳು ಗ್ರಾಮೀಣ ಭಾಗದ್ದೇ ಆಗಿವೆ. ಹೀಗಾಗಿ ಗ್ರಾಮೀಣ ಭಾಗದ ಜನರು ಕೋವಿಡ್ ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೋವಿಡ್ ಹರಡುವಿಕೆಯ ಪ್ರಮಾಣವನ್ನು ನಿಯಂತ್ರಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದರು.
ಕೋವಿಡ್ ಸೋಂಕು ಪ್ರಕರಣಗಳನ್ನು ಗಮನಿಸಿದಾಗ 21 ರಿಂದ 40 ವಯೋಮಿತಿಯೊಳಗಿನವರು ಹೆಚ್ಚು ಸೋಂಕಿಗೆ ಒಳಪಟ್ಟಿರುವುದು ಕಂಡು ಬಂದಿದೆ. 1036 ಪ್ರಕರಣಗಳು ಈ ವಯೋಮಾನದ್ದವರಾಗಿದೆ. ಇದರಿಂದ ಯುವ ಜನರು ಎಚ್ಚರವಹಿಸಬೇಕಿದೆ ಎಂದರು.
ಇತ್ತೀಚೆಗೆ ಸಂಭವಿಸಿದ ಕೋವಿಡ್ ಸಂಬಂಧಿ 9 ಮರಣ ಪ್ರಕರಣದ ವರದಿ ಗಮನಿಸಿದಾಗ 60 ವರ್ಷ ಮೇಲ್ಪಟ್ಟ ಹೆಚ್ಚು ವಯಸ್ಸಿನವರು ಲಸಿಕೆ ಪಡೆಯದಿರುವುದು ತಿಳಿದು ಬಂದಿದೆ. ಹೀಗಾಗಿ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯಲು ಉದಾಸೀನ ಮಾಡಬಾರದು. ಲಸಿಕೆ ನಮ್ಮ ಜೀವ ಕಾಪಾಡುತ್ತದೆ. ಆದ್ದರಿಂದ ಯಾರೂ ನಿರ್ಲಕ್ಷಿಸದೆ ಕಡ್ಡಾಯವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಆರೋಗ್ಯ ಮತ್ತರು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಹಾಜರಿದ್ದರು.