ಚಿಕಿತ್ಸೆಗೆ ಶೇ.10ರಷ್ಟು ಬೆಡ್‍ಗಳನ್ನು ಮೀಸಲಿಡಲು ಮನವಿ


ಧಾರವಾಡ,ಮೇ.18: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್ ರೋಗ ನಿರೋಧಕ ಲಸಿಕೆಯನ್ನು ಆದ್ಯತೆ ಮೇಲೆ ನೀಡಬೇಕೆಂದು ಮತ್ತು ಕರ್ತವ್ಯನಿರತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಶೇ.10ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ಧನಗೌಡರ ಆಗ್ರಹಿಸಿದ್ದಾರೆ.
ಅವರು ಸಂಘದ ಪದಾರಿಕಾರಿಗಳೋಂದಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ತವ್ಯ ನಿರ್ವಹಿಸುತ್ತಿರುವ ಸಂಧರ್ಬದಲ್ಲಿ ಕೋವಿಡ್-19 ರೋಗವು ತಗಲುವ ಸಂಭವಿದ್ದು ಅವರಿಂದ ಕುಟುಂಬದವರಿಗೂ ರೋಗ ಹರಡುವ ಸಂಭವವಿರುತ್ತದೆ. ಕಾರಣ ಅಗತ್ಯ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಶೇ.10 ರಷ್ಟು ಬೆಡ್‍ಗಳನ್ನು ಪ್ರಥಮ ಆಧ್ಯತೆಯಾಗಿ ಮೀಸಲಿಟ್ಟು ಸೂಕ್ತ ಆರೋಗ್ಯ ಚಿಕಿತ್ಸೆ ಒದಗಿಸಲು ತಿಳಿಸಲಾಗಿದೆ.
ಕೋವಿಡ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 18 ವರ್ಷ ಮೇಲ್ಪಟ್ಟ ಅಧಿಕಾರಿ,ಸಿಬ್ಬಂದಿಗಳಿಗೆ ಪ್ರಥಮ ಆದ್ಯತೆ ಮೇಲೆ ಕೋವಿಡ್ ಲಸಿಕೆಯನ್ನು ನೀಡಿ ನಂತರ ಇನ್ನುಳಿದ ನೌಕರರ ಕುಟುಂಬ ವರ್ಗದವರಿಗೆ ಹಂತಹಂತವಾಗಿ ಕೋವಿಡ್ ಲಸಿಕೆಯನ್ನು ನೀಡುವಂತೆ ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ಧನಗೌಡರ ವಿನಂತಿಸಿದ್ದಾರೆ.
ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆ ಆಗಿರುವ ಕೃಷಿಇಲಾಖೆ ಅಧಿಕಾರಿ ಹಾಗೂ ನೌಕರರು ರೈತರಿಗೆ ಕೃಷಿ ಪರಿಕರಗಳಾದ ಬೀಜ, ಗೊಬ್ಬರ, ಕೀಟನಾಶಕಗಳನ್ನು ಸಕಾಲದಲ್ಲಿ ಪೂರೈಸಲು ಶ್ರಮಿಸುತ್ತಿದ್ದಾರೆ.
ಸಧ್ಯ ಮುಂಗಾರು ಹಂಗಾಮಿನ ಬಿತ್ತÀನೆ ಬೀಜದ ವಿತರಣಾ ಕಾರ್ಯ ನಡೆಯುತ್ತಿದ್ದು ಅಧಿಕಾರಿ ಸಿಬ್ಬಂದಿಗಳು ಜನದಟ್ಟಣೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದು. ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದವರಿಗೆ ಲಸಿಕೆಯನ್ನು ಹಾಕಿಸುವುದು ಅಗತ್ಯವಿದೆ. ಕೂಡಲೇ ಆಧ್ಯತೆ ಮೇರೆಗೆ ಕೃಷಿ ಇಲಾಖೆಯವರಿಗೆ ಲಸಿಕೆಗಳನ್ನು ಪೂರೈಸಲು ಕ್ರಮಕೈಗೊಳ್ಳುವಂತೆ ವಿನಂತಿಸುತ್ತೇವೆ.
ಬಧ್ದತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ 45 ವರ್ಷದ ಒಳಗಿನ ನೌಕರರಿಗೂ ಲಸಿಕೆಯನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ.