ಚಿಕಿತ್ಸೆಗೆ ನೆರವು ಕೋರಿ ಮನವಿ

ಬೆಂಗಳೂರು, ಡಿ. ೪- ಈ ಭಾವಚಿತ್ರದಲ್ಲಿರುವ ೫೨ ವರ್ಷ ವಯಸ್ಸಿನ ಮಹಿಳೆ ಭಾರತಿ.ಹೆಚ್ ಅವರು ಅನೆರೈಸ್ಮ್ ಎಂಡೋವಾಸ್ಕುಲರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ಅವರನ್ನು ನಗರದ ಮಿಲ್ಲರ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಈ ಮಹಿಳೆ ದಾಖಲಾಗಿದ್ದು, ಉಪ ಅರಾಕ್ನಾಯಿಡ್ ರಕ್ತ ಸ್ರಾವದೊಂದಿಗೆ ಆಂಟೀರಿಯರ್ ಕಮ್ಯುನಿಕೇಷನ್ ಅನ್ಯೂರಿಸಮ್ ಹೊಂದಿದ್ದು, ಇವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಎಸ್. ಖಾನಾಪುರೆ ಅವರು ತಿಳಿಸಿದ್ದಾರೆ.
ನಮ್ಮ ತಾಯಿಯವರ ಮೆದುಳು ಚಿಕಿತ್ಸೆಗೆ ಸುಮಾರು ೨೫ ಲಕ್ಷ ರೂ.ಗಳು ವೆಚ್ಚವಾಗಲಿದ್ದು, ಆದ್ದರಿಂದ ದಾನಿಗಳು ಯಾರಾದರೂ ಇದ್ದಲ್ಲಿ ಸಹಾಯ ಮಾಡುವಂತೆ ಕನ್ನಡದ ಹಿನ್ನೆಲೆ ಗಾಯಕ ಮಧ್ವೇಶ್ ಭಾರದ್ವಾಜ್ ರವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ದಾನಿಗಳು ಮಧ್ವೇಶ್ ಭಾರದ್ವಾಜ್, ಕೆನರಾ ಬ್ಯಾಂಕ್, ಮಾಧವ ನಗರ ಶಾಖೆ, ಎಸಿಸಿ ನಂ. ೦೭೮೮೧೦೧೦೫೨೬೦ ಐಎಫ್‌ಎಸ್‌ಸಿ-ಸಿಎನ್‌ಆರ್‌ಬಿ ೦೦೦೦೭೮೮ ಸಲ್ಲಿಸಲು ಕೋರಿದ್ದಾರೆ.