ಚಿಕಿತ್ಸೆಗಾಗಿ 20 ಕಿಲೋಮೀಟರ್: ಡೋಲಿಯಲ್ಲಿ ಹೊತ್ತುಕೊಂಡು ಹೋದ ಕುಟುಂಬಸ್ಥರು

ಹನೂರು ಜ.20:- ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂ. ವ್ಯಾಪ್ತಿಯ ದೊಡ್ಡಾಣೆ ಗ್ರಾಮದ ಮಹದೇವ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಕರೆದೊಯ್ಯಲು ಡೋಲಿ ಕಟ್ಟಿಕೊಂಡು ಹೊತ್ತು ಹೋಗುವ ಪರಿಸ್ಥಿತಿಯಲ್ಲಿ ಇಲ್ಲಿಲಿನ ಜನರು ಅನುಭವಿಸುತ್ತಿರುವುದು ಜನಪ್ರತಿನಿಧಿಗಳು ಆಡಳಿತ ವರ್ಗಗದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ದೊಡ್ಡಾಣೆ ಗ್ರಾಮದ ಮಹದೇವ ಎಂಬುವರನ್ನು ಚಿಕಿತ್ಸೆಗಾಗಿ ಮಾರ್ಟಳ್ಳಿ ಗ್ರಾಮಕ್ಕೆ ಡೋಲಿಯಲ್ಲಿ ಸರಿಸುಮಾರು 8. ಕಿಲೋ ಮೀಟರ್ ದೂರ ಡೋಲಿಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ಜರುಗಿದೆ.
ದೊಡ್ಡನೆ ಗ್ರಾಮದದಿಂದ ಮಾರ್ಟಳ್ಳಿ ಗ್ರಾಮಕ್ಕೆ ಸರಿಸುಮಾರು 8. ಕಿ.ಮೀ ಇದೆ, ಮಲೆ ಮಹದೇಶ್ವರ ಬೆಟ್ಟಕ್ಕೆ 20 ಕಿ.ಮೀ ಇದೆ ಕಾಲ್ನಡಿಗೆಯಲ್ಲಿ ಹೋಗುವಂತ ಪರಿಸ್ಥಿತಿ ಇಂದಿಗೂ ಇದೆ. ಈ ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಅಭಿವೃದ್ಧಿಯಿಂದ ವಂಚಿತವಾಗಿದೆ. ಸರಿಯಾದ ರಸ್ತೆಯು ಇಲ್ಲದ ಪರಿಸ್ಥಿತಿಯಲ್ಲಿ ಅರಣ್ಯ ಮಾರ್ಗದಲ್ಲಿ ಸಂಚರಿಸುತ್ತಾರೆ.
ಆಕಸ್ಮಿಕವಾಗಿ ತುರ್ತು ಪರಿಸ್ಥಿತಿಯ ವಾಹನಗಳು ಇಲ್ಲಿಗೆ ಬರುವುದಿಲ್ಲ. ಇದರಿಂದ ಸಾವು ನೋವುಗಳಾಗುವ ಘಟನೆಗಳು ಕೂಡ ನಡೆದಿದೆ.
ಇಲ್ಲಿ ವಾಸಿಸುವ ಜನರು ದಿನ ಬಳಕೆ ಸರಕು ಸಾಮಾನುಗಳನ್ನು ಮನೆಗೆ ಬೇಕಾಗುವ ವಸ್ತುಗಳನ್ನು ಕಷ್ಟಪಟ್ಟು ಹೊತ್ತುಕೊಂಡು ಸಾಗಿಸಬೇಕು.
ಯಾರಿಗಾದರೂ ಈ ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ 10 -20 ಕಿಲೋ ಮೀಟರ್ ಡೋಲಿ ಕಟ್ಟಿಕೊಂಡು ಹೊತ್ತು ನಡೆಯಬೇಕು. ಇದು ಸಾಮಾನ್ಯ ವಿಷಯವಲ್ಲ ಅರ ಸಾಹಸವೇ ಪಡಬೇಕು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ರೋಗಿಯ ಪರಿಸ್ಥಿತಿ ಏನಾಗಬಹುದು ಎಂಬುದನ್ನ ಜನಪ್ರತಿನಿಧಿಗಳೇ ಅರಿತುಕೊಳ್ಳಬೇಕು.
ಸ್ವತಂತ್ರ ಬಂದು ಇಷ್ಟು ವರ್ಷಗಳ ಕಳೆದರು ಈ ಭಾಗದ ಜನರ ಗೋಳುವರು ಯಾರು? ಆನೆ ದಾಳಿಯಿಂದ ಮೃತ ಪಟ್ಟಿದ್ದಾರೆ ಕಾಡು ಹಂದಿಗಳ ದಾಳಿಯಿಂದ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಈ ಗ್ರಾಮ ಇರುವುದರಿಂದ ದಿನನಿತ್ಯ ಪ್ರಾಣಭಯದಿಂದ ಬದುಕುವಂಥ ಪರಿಸ್ಥಿತಿಯಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.
ದೊಡ್ಡಾಣೆ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಬಂದು ಸಮಸ್ಯೆ ಆಲಿಸಿದರೂ ಪ್ರಯೋಜನವಾಗಿಲ್ಲ. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ನರೇಂದ್ರ ಅವರು ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.