ಚಿಕಲಪರ್ವಿ : ಪುಷ್ಕರ ಪೂಜೆಯ ಸ್ಥಳ ವೀಕ್ಷಣೆ

ಮಾನ್ವಿ.ನ.16.- ನವೆಂಬರ್ 20 ರಿಂದ ಡಿಸೆಂಬರ್ 01 ರವರೆಗೂ ನಡೆಯುವ ಪುಷ್ಕರ ಪೂಜೆಯ ಸ್ಥಳವಾದ ಚಿಕಲಪರ್ವಿ ಗ್ರಾಮದ ತುಂಗಾಭದ್ರಾ ನದಿಯ ದಡದಲ್ಲಿ ನಡೆಯುವ ಪೂಜೆ ಸ್ಥಳವನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಪರಿಶೀಲನೆ ಮಾಡಿ ಪೂಜೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರಿಗೆ ಹಾಗೂ ಜೆ ಡಿಎಸ್ ಮುಖಂಡರಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಂಖಡರಾದ ರಾಜಾ ರಾಮಚಂದ್ರ ನಾಯಕ,ವೆಂಕಟೇಶ ನಾಯಕ ಮದ್ಲಾಪೂರ,ಶರಣಪ್ಪ ಗೌಡ ಮದ್ಲಾಪೂರ, ಬಸವರಾಜ ಶೆಟ್ಟಿ, ಮೌಲ ಸಾಬ್,ಗೋಪಾಲ ನಾಯಕ ಹರವಿ,ಲಕ್ಷ್ಮಣ ಯಾದವ,ಮರೇಗೌಡ ಬುದ್ದಿನಿ, ಕಮ್ಮ ಸಂಘದ ತಾಲ್ಲೂಕು ಅದ್ಯಕ್ಷ ಬದರಿ ನಾರಾಯಣ,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ರಘುರಾಮ ರೆಡ್ಡಿ, ಪ್ರಸಾದ್ ರೆಡ್ಡಿ, ಪ್ರಕಾಶ ರೆಡ್ಡಿ,ವೆಂಕಟರಾವ್ ಕವಿತಾಳ , ಪಣಿ ರೆಡ್ಡಿ, ಸುಬ್ರಹ್ಮಣ್ಯ ರೆಡ್ಡಿ , ಸುರೇಶ್ ಕವಿತಾಳ,ಸುರಿ ಬಾಬು,ರವಿ ಬಾಬು,ಸುರಿ ನಾರಾಯಣ,ಭಾಸ್ಕರ್ ರೆಡ್ಡಿ, ವಿ ಟಿ ಮಲ್ಲಿಕಾರ್ಜುನ,ಹನುಮಂತ ನಾಯಕ,ಖಾಸಿಂ ಸಾಬ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತಿರಿದ್ದರು.