ಚಿಕನ್ ೬೫

ಬೇಕಾಗುವ ಸಾಮಗ್ರಿಗಳು

*ಚಿಕನ್ – ೧/೨ ಕೆ.ಜಿ
*ಮೊಟ್ಟೆ – ೧
*ಮೈದಾ ಹಿಟ್ಟು – ೨ ಟೇಬಲ್ ಸ್ಪೂನ್
*ಕಾರ್ನ್‌ಫ್ಲೋರ್ – ೧ ಚಮಚ
*ಅರಿಶಿಣ – ೧/೨ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಟೇಬಲ್ ಸ್ಪೂನ್
*ಗರಂ ಮಸಾಲ – ೧ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಎಣ್ಣೆ – ೧ ಲೀಟರ್
*ಮೊಸರು – ೨ ಚಮಚ
*ನಿಂಬೆ ಹಣ್ಣು – ೧
*ಹಸಿ ಮೆಣಸಿನಕಾಯಿ – ೪
*ಕರಿಬೇವು – ಸ್ವಲ್ಪ
*ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬೌಲ್‌ಗೆ ಚಿಕನ್ ಪೀಸ್, ಮೈದಾ ಹಿಟ್ಟು, ಮೊಟ್ಟೆ, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಕರಿಬೇವು, ಅಚ್ಚಖಾರದ ಪುಡಿ,ಧನಿಯಾ ಪುಡಿ, ಗರಂ ಮಸಾಲ, ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಮತ್ತು ನಿಂಬೆರಸ ವನ್ನು ಹಾಕಿ ಬೆರೆತುಕೊಳ್ಳುವಂತೆ ಚೆನ್ನಾಗಿ ಕಲಸಿ ೧/೨ ಘಂಟೆ ನೆನೆಸಿಡಿ. ಇದನ್ನು ಎಣ್ಣೆ ಕಾಯಿಸಿರುವ ಬಾಣಲಿಗೆ ಹಾಕಿ, ಕೆಂಪಾಗುವವರೆಗೆ ಕರಿದರೆ, ಚಿಕನ್- ೬೫ ರೆಡಿ.