ಚಿಕನ್ ೬೫

ಬೇಕಾಗುವ ಸಾಮಗ್ರಿಗಳು:

  • ಒಂದು ಕೆಜಿ ಚಿಕನ್ (ಸಾಧರಣ ಗಾತ್ರದಲ್ಲಿ ಕತ್ತರಿಸಿದ್ದು)
  • ೩-೪ ಚಮಚ ಖಾರದ ಪುಡಿ,
  • ೩ ಚಮಚ ಗರಂ ಮಸಾಲಾ ಪುಡಿ
  • ೨ ದೊಡ್ಡ ಈರುಳ್ಳಿ ಅಥವಾ ಸಾಧಾರಣ ಗಾತ್ರದ ೩ ಈರುಳ್ಳಿ
  • ೨ ಚಮಚ ಶುಂಠಿ ಪೇಸ್ಟ್
  • ೨ ಚಮಚ ಬೆಳ್ಳುಳ್ಳಿ ಪೇಸ್ಟ್
  • ೩ ಹಸಿ ಮೆಣಸಿನಕಾಯಿ
  • ೨ ಟೊಮೆಟೊ
  • ಎಣ್ಣೆ
  • ರುಚಿಗೆ ತಕ್ಕ ಉಪ್ಪು
  • ಕರಿಬೇವಿನ ಎಲೆ
    ಮಾಡುವ ವಿಧಾನ:
    ಚಿಕನ್ ಅನ್ನು ತೊಳೆದು . ಕತ್ತರಿಸಿದ ಈರುಳ್ಳಿ (ಅರ್ಧದಷ್ಟು) ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು. ತುಂಬಾ ನೀರು ಹಾಕಬೇಡಿ. ಚಿಕನ್ ಬೆಂದಾಗ ನೀರಿನಂಶವಿರಬಾರದು, ಆದ್ದರಿಂದ ಬೇಯಲು ಅವಶ್ಯಕವಾದ ನೀರು ಮಾತ್ರ ಹಾಕಬೇಕು.
    ಈಗ ಮತ್ತೊಂದು ಪಾತ್ರೆಯನ್ನು ಬಿಸಿ ಮಾಡಿ ನಂತರ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಕರಿಬೇವು, ಮತ್ತು ಕತ್ತರಿಸಿದ ಉಳಿದ ಅರ್ಧ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.
    ಈಗ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಖಾರದಪುಡಿ, ಅರಿಶಿನಪುಡಿ, ಗರಂ ಮಸಾಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ,ಮಿಶ್ರ ಮಾಡಿ ೫ ನಿಮಿಷ ಬೇಯಿಸಬೇಕು. ನಂತರ ಈ ಮಿಶ್ರಣಕ್ಕೆ ಬೇಯಿಸಿದ ಚಿಕನ್ ಹಾಕಿ ಮಿಶ್ರ ಮಾಡಿ ಮತ್ತೆ ೫ ನಿಮಿಷ ಬೇಯಿಸಬೇಕು. ಈಗ ತಯಾರಾಗಿರುವ ಚಿಕನ್ ೬೫ಗೆ ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.
    ಇನ್ಸ್‌ಟಂಟ್ ಜೋಳದ ದೋಸೆ ರೆಸಿಪಿಇನ್ಸ್‌ಟಂಟ್ ಜೋಳದ ದೋಸೆ ರೆಸಿಪಿ ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.