ಚಿಕನ್ ವರುವಲ್

ಬೇಕಾಗುವ ಸಾಮಗ್ರಿಗಳು:

  • ಚಿಕನ್ – ಅರ್ಧ ಕೆಜಿ
  • ಈರುಳ್ಳಿ – ೨
  • ಟೊಮೊಟೊ – ೨
  • ಚಕ್ಕೆ – ೪
  • ಲವಂಗ – ೫
  • ಒಣಮೆಣಸಿನಕಾಯಿ – ೫
  • ಕರಿಬೇವು – ೧೫ ಎಲೆ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ೨೦೦ ಮಿ. ಲೀ.
  • ಶುಂಠಿ – ೨೫ ಗ್ರಾಂ
  • ಬೆಳ್ಳುಳ್ಳಿ – ೧೦ ಎಸಳು
  • ಒಣಕೊಬ್ಬರಿತುರಿ – ೧ ಚಮಚ
  • ಸೋಂಪು – ೧ ಚಮಚ
  • ಧನಿಯಾ ಪುಡಿ – ೧ ಚಮಚ
  • ಕೊತ್ತಂಬರಿಸೊಪ್ಪು – ೨ ಚಮಚ
  • ಕಾಳುಮೆಣಸು – ೧ ಚಮಚ
  • ಜೀರಿಗೆ – ಅರ್ಧ ಚಮಚ
  • ಅಚ್ಚಖಾರದಪುಡಿ – ೧ ಚಮಚ.

ಮಾಡುವ ವಿಧಾನ:
ಪ್ಯಾನ್‌ಗೆ ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಕಾಳುಮೆಣಸು, ಧನಿಯಾ ಮತ್ತು ಸೋಂಪು ಹಾಕಿ ಹದವಾಗಿ ಹುರಿಯಿರಿ. ತಣ್ಣಗಾದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಒಣಮೆಣಸಿನಕಾಯಿ, ಕರಿಬೇವು, ಟೊಮೊಟೊ, ಉಪ್ಪು ಹಾಕಿ ಹುರಿಯಿರಿ. ನಂತರ ಚಿಕನ್ ಪೀಸ್‌ಗಳನ್ನು ಹಾಕಿ. ಅರಿಶಿನ, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಬೆರೆಸಿ. ಮುಚ್ಚಳ ಮುಚ್ಚಿ ೧೦ ನಿಮಿಷ ಚೆನ್ನಾಗಿ ಬೇಯಲುಬಿಡಿ. ಕೊನೆಯಲ್ಲಿ ಅಚ್ಚಖಾರದಪುಡಿ , ಮಸಾಲಪುಡಿ, ಒಣಕೊಬ್ಬರಿತುರಿ ಬೆರೆಸಿಕೊಂಡು ಹದವಾಗಿ ಬೇಯಿಸಿದರೆ, ಸ್ವಾದಿಷ್ಟ ಚಿಕನ್ ವರುವಲ್ ಸವಿಯಲು ಸಿದ್ಧ.