ಚಿಕನ್ ಲಿವರ್ ಫ್ರೈ

ಬೇಕಾಗುವ ಸಾಮಾಗ್ರಿಗಳು
ಚಿಕನ್ ಲಿವರ್ : ೧/೪ ಕೆಜಿ
ಈರುಳ್ಳಿ : ೧ ದಪ್ಪದು
ಎಣ್ಣೆ : ಕೊತ್ತಂಬರಿ
ಬ್ಲಾಕ್ ಪೆಪ್ಪರ್ ಪುಡಿ : ಒಂದೂವರೆ ಚಮಚ
ಅರಿಶಿಣ ಪುಡಿ : ಚಿಟಿಕೆ
ಖಾರದ ಪುಡಿ : ೧ ಚಮಚ
ನಿಂಬೆ ರಸ : ೧ ಹಣ್ಣಿನ ರಸ
ಶುಂಠಿ : ಬೆಳ್ಳುಳ್ಳಿ ಪೇಸ್ಟ್
ಉಪ್ಪು : ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  • ನಾನ್ ಸ್ಟಿಕ್ ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿ.
  • ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
  • ತೊಳೆದ ಚಿಕನ್ ಲಿವರ್ ಸೇರಿಸಿ. ಬಣ್ಣ ಬದಲಾಗುವರೆಗೆ ಫ್ರೈ ಮಾಡಿ.
  • ಲಿವರ್ ಬಣ್ಣ ಚೇಂಜ್ ಆದ ಮೇಲೆ ಅದಕ್ಕೆ ಅರಿಶಿಣ ಪುಡಿ, ಉಪ್ಪು, ಖಾರದ ಪುಡಿ, ಬ್ಲಾಕ್
    ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.
  • ೩-೪ ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
  • ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು. ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ