ಚಿಕನ್ ರೋಸ್ಟ್

ಬೇಕಾಗುವ ಸಾಮಗ್ರಿಗಳು

*ಚಿಕನ್ – ೧/೪ ಕೆ.ಜಿ.
*ಈರುಳ್ಳಿ – ೨
*ಸಾಂಬಾರ್ ಈರುಳ್ಳಿ – ೪
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಕರಿಬೇವು – ೧೦ ಎಲೆ
*ನೀರು –
*ಚಕ್ಕೆ, ಲವಂಗ, ಏಲಕ್ಕಿ – ೩-೪
*ಬೆಳ್ಳುಳ್ಳಿ -೨
*ಅರಿಶಿಣ – ೧ ಚಮಚ
*ಉಪ್ಪು – ೧ ಚಮಚ
*ಎಣ್ಣೆ – ೧೦೦ ಮಿ.ಲೀ

ಮಾಡುವ ವಿಧಾನ :

ಪ್ಯಾನ್‌ಗೆ ಹೆಚ್ಚಿದ ಈರುಳ್ಳಿ, ಸಾಂಬಾರ್ ಈರುಳ್ಳಿ, ಚಕ್ಕೆ, ಲವಂಗ, ಏಲಕ್ಕಿಯನ್ನು ಒಂದೊಂದಾಗಿ ಹಾಕಿ ಫ್ರೈ ಮಾಡಿ. ನಂತರ ಬೆಳ್ಳುಳ್ಳಿ, ಶುಂಠಿ, ಚಿಕನ್, ಅರಿಶಿಣ, ಅಚ್ಚಖಾರದ ಪುಡಿ, ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಮುಚ್ಚಳ ಮುಚ್ಚಿ ಬೇಯಿಸಿ, ಕೊನೆಯಲ್ಲಿ ಗರಂ ಮಸಾಲ, ಕರಿಬೇವು ಹಾಕಿದರೆ ಚಿಕನ್ ರೋಸ್ಟ್ ಸವಿಯಲು ರೆಡಿ.