ಚಿಕನ್ ಮಸಾಲ

ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ
*ಮೆಂತ್ಯಸೊಪ್ಪು – ಸ್ವಲ್ಪ
*ಪುದೀನ ಸೊಪ್ಪು – ಸ್ವಲ್ಪ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಈರುಳ್ಳಿ – ೨
*ಟೊಮೆಟೋ – ೧
*ಅರಿಶಿಣ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ –

ಮಾಡು ವಿಧಾನ :

ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಪುದೀನ ಸೊಪ್ಪು, ಮೆಂತ್ಯ ಸೊಪ್ಪು, ಅರಿಶಿಣ, ಟೊಮೆಟೋ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲ, ಚಿಕನ್ ಪೀಸುಗಳು, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ಮುಚ್ಚಳ ಮುಚ್ಚಿ ಹದವಾಗಿ ಬೇಯಿಸಿ. ಈಗ ರುಚಿಯಾದ ನಿಮ್ಮ ನೆಚ್ಚಿನ ಚಿಕನ್ ಮಸಾಲ ರೆಡಿ.