ಚಿಕನ್ ಧೋಪಿಯಾಜ

ಬೇಕಾಗು ಸಾಮಗ್ರಿಗಳು

*ಚಿಕನ್ – ೧/೨ ಕೆ.ಜಿ
*ಈರುಳ್ಳಿ – ೨
*ಹಸಿರು ಮೆಣಸಿನಕಾಯಿ – ೫
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಗರಂ ಮಸಾಲ – ೧/೨ ಚಮಚ
*ಕಸೂರಿ ಮೇಥಿ – ೧ ಚಮಚ
*ಅರಿಶಿಣ – ೧ ಚಮಚ
*ಟೊಮೆಟೋ – ೨
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಜೀರಿಗೆ ಪುಡಿ – ೧/೨ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಫ್ರೆಶ್ ಕ್ರೀಮ್ – ೨ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೫೦.ಮಿ.ಲೀ
*ನೀರು –

ಮಾಡುವ ವಿಧಾನ :

ಬಾಣಲಿಗೆ ಎಣ್ಣೆ ಹಾಕಿ. ಕಾದ ಮೇಲೆ ಈರುಳ್ಳಿ ಹಾಕಿಕೊಳ್ಳಿ. ನಂತರ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಪೇಸ್ಟ್, ಚಿಕನ್ ಪೀಸ್‌ಗಳು, ಅರಿಶಿಣ, ಸಣ್ಣಗೆ ಹೆಚ್ಚಿದ ಟೊಮೆಟೋ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಅಗತ್ಯವಿರುವಷ್ಟು, ನೀರು, ಉಪ್ಪು ಹಾಕಿ, ಮುಚ್ಚಳ ಮುಚ್ಚಿ ಬೇಯಲು ಬಿಡಿ. ಬೆಂದ ನಂತರ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ, ಕ್ಯೂಬ್ ಆಕಾರದಲ್ಲಿ ಹೆಚ್ಚಿದ ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಫ್ರೆಶ್ ಕ್ರೀಮ್ ಹಾಕಿ. ಈಗ ಚಿಕನ್ ಧೋಪಿಯಾಜ ರುಚಿ ರುಚಿಯಾಗಿ ಸವಿಯಲು ಸಿದ್ದ.