ಚಿಕನ್ ಧಮ್ಕಾ ಮುಗ್ಗಿ

ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೪ ಕೆ.ಜಿ
*ಜೀರಿಗೆ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಅಚ್ಚಖಾರದ ಪುಡಿ – ೨ ಚಮಚ
*ಅರಿಶಿಣ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಈರುಳ್ಳಿ – ೨
*ಮೊಸರು – ೧೦೦ ಮಿ.ಲೀ
*ಹಾಲು – ೧/೪ ಲೀಟರ್
*ಪಲಾವ್ ಎಲೆ – ೧
*ಚಕ್ಕೆ – ೪ ಪೀಸ್
*ಲವಂಗ – ೫-೬
*ಕರಿಬೇವು – ಸ್ವಲ್ಪ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಉಪ್ಪು – ಸ್ವಲ್ಪ
*ಎಣ್ಣೆ – ಹುರಿಯಲು

ಮಾಡುವ ವಿಧಾನ :

ಬೌಲಿಗೆ ಚಿಕನ್ ಪೀಸ್ ಮತ್ತು ಮೊಸರನ್ನು ಹಾಕಿ. ಇದಕ್ಕೆ ಜೀರಿಗೆ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಸೊಪ್ಪು, ಹಾಗೂ ಉಪ್ಪನ್ನೂ ಹಾಕಿ ೨೦ ನಿಮಿಷ ನೆನೆಯಲು ಬಿಡಿ. ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ. ಪಲಾವ್ ಎಲೆ, ಚಕ್ಕೆ, ಲವಂಗ, ಕರಿಬೇವು, ಹಾಕಿ ಹದವಾಗಿ ಫ್ರೈ ಮಾಡಿರಿ. ಇದಕ್ಕೆ ನೆನೆಸಿದ ಚಿಕನ್ ಮತ್ತು ಹಾಲನ್ನು ಹಾಕಿ ಮುಚ್ಚಿ . ಧಮ್ ಕಟ್ಟಿ ಸುಮಾರು ೨೦ ನಿಮಿಷಗಳ ಕಾಲ ಬೇಯಿಸಿ. ಈಗ ಚಿಕನ್ ಧಮ್ಕಾ ಮುರ್‍ಗಿ ಸವಿಯಲು ರೆಡಿ.