ಚಿಕನ್ ಟೆಂಡರ್

ಬೇಕಾಗುವ ಸಾಮಗ್ರಿಗಳು:

  • ಚಿಕನ್ – ೨೦೦ ಗ್ರಾಂ
  • ಕಾಳುಮೆಣಸಿನಪುಡಿ – ೨ ಚಮಚ
  • ಸಾಸಿವೆ ಎಣ್ಣೆ – ೨ ಚಮಚ
  • ನಿಂಬೆಹಣ್ಣು – ೧
  • ಮೊಟ್ಟೆ – ೧
  • ಬ್ರೆಡ್ ಕ್ರಮ್ಸ್ – ೫೦ ಗ್ರಾಂ
  • ಎಣ್ಣೆ – ೧ ಲೀ.
  • ಉಪ್ಪು – ರುಚಿಗೆ ತಕ್ಕಷ್ಟು
  • ಮೈದಾ – ೧೦೦ ಗ್ರಾಂ

ಮಾಡುವ ವಿಧಾನ:
ಒಂದು ಪಾತ್ರೆಗೆ ಚಿಕನ್, ಕಾಳುಮೆಣಸಿನಪುಡಿ, ಸಾಸಿವೆ ಎಣ್ಣೆ, ನಿಂಬೆರಸ, ಮೊಟ್ಟೆ, ಉಪ್ಪು ಹಾಕಿ ಕಲಸಿ, ಚಿಕನ್ ಅನ್ನು ನೀರಿನಲ್ಲಿ ಕಲೆಸಿಕೊಂಡ ಮೈದಾಹಿಟ್ಟಿನಲ್ಲಿ ಅದ್ದಿ ಬ್ರೆಡ್ ಕ್ರಮ್ಸ್ ಮೇಲೆ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ರುಚಿಕರ ಚಿಕನ್ ಟೆಂಡರ್ ರೆಡಿ ಟು ಸರ್ವ್.