ಚಿಕನ್ ಕೈಮಾ ಮಸಾಲೆ ದೋಸೆ

ಬೇಕಾಗುವ ಸಾಮಗ್ರಿಗಳು

*ಚಿಕನ್ ಕೈಮಾ – ೧/೪ ಕೆ.ಜಿ
*ದೋಸೆ ಹಿಟ್ಟು- ೧ ಬೌಲ್
*ಅಕ್ಕಿ ಹಿಟ್ಟು – ೩ ಚಮಚ
*ಈರುಳ್ಳಿ – ೧
*ಬೇಯಿಸಿದ ಆಲೂಗಡ್ಡೆ – ೧
*ಹಸಿರು ಮೆಣಸಿನಕಾಯಿ -೩
*ಟೊಮ್ಯಾಟೊ – ೧
*ಅಚ್ಚ ಖಾರದ ಪುಡಿ – ೧
*ಗರಂ ಮಸಾಲ – ೧/೨
*ಕೊತ್ತಂಬರಿ ಸೊಪ್ಪು – ೧ ಚಮಚ
*ಸಕ್ಕರೆ – ೧ ಚಮಚ
*ನಿಂಬೆರಸ – ೧/೨ ಚಮಚ
*ತುಪ್ಪ – ೧೦೦ ಮಿ.ಲೀ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೦೦
*ನೀರು – ಅಳತೆಗೆ

ಮಾಡುವ ವಿಧಾನ :

ಬೌಲ್‌ಗೆ ದೋಸೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ಮೇಲೆ, ಹಸಿರು ಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ, ಚಿಕನ್ ಕೈಮಾ, ಉಪ್ಪು, ಹಾಕಿ ಹುರಿಯಿರಿ.ನಂತರ ಗರಂ ಮಸಾಲ,
ಅಚ್ಚಖಾರದ ಪುಡಿ, ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ನಿಂಬೆರಸವನ್ನು ಹಾಖಿ ಫ್ರೈ ಮಾಡಿ. ಕಾದ ತವಾ ಮೇಲೆ ರೆಡಿಯಾದ ದೋಸೆಯ ಹಿಟ್ಟನ್ನು ಹಾಕಿ ದೋಸೆ ಹುಯ್ಯಿರಿ. ಅದರ ಮೇಲೆ ರೆಡಿ ಮಾಡಿಕೊಂಡ ಚಿಕನ್ ಕೈಮಾ ಮಸಾಲೆಯನ್ನು ಹರಡುವಂತೆ ಹಾಕಿ. ಮಧ್ಯದಲ್ಲಿ ಅಲ್ಲಲ್ಲಿ ರೌಂಡಾಗಿ ಕಟ್ ಮಾಡಿದ ಟೊಮೆಟೊ ಪೀಸ್‌ಗಳನ್ನು ಹಾಕಿ ಅಲಂಕರಿಸಿದರೆ ಚಿಕನ್ ಕೈಮಾ ಮಸಾಲೆ ದೋಸೆ ತಿನ್ನಲು ರೆಡಿ.