ಚಿಕನ್ ಕೈಮಾ ಗೋಬಿ ಮಂಚೂರಿ

ಬೇಕಾಗುವ ಸಾಮಗ್ರಿಗಳು

*ಚಿಕನ್ ಕೈಮಾ – ೧/೨ ಕೆ.ಜಿ
*ಹೂಕೋಸು – ೧/೪ ಕೆ.ಜಿ
*ಈರುಳ್ಳಿ – ೨
*ಬೆಳ್ಳುಳ್ಳಿ – ೧
*ಶುಂಠಿ – ೧ ಚಮಚ
*ದಪ್ಪ ಮೆಣಸಿನಕಾಯಿ – ೨
*ಹಸಿರು ಮೆಣಸಿನಕಾಯಿ – ೨
*ಮೊಟ್ಟೆ – ೧
*ಚಿಲ್ಲಿ ಸಾಸ್ – ೧ ಚಮಚ
*ಸೋಯಾ ಸಾಸ್ – ೧ ಚಮಚ
*ಮೈದಾ ಹಿಟ್ಟು – ೧ ಚಮಚ
*ಕಾರ್ನ್‌ಫ್ಲೋರ್ – ೧ ಚಮಚ
*ಟೊಮೆಟೊ ಸಾಸ್ – ೧ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಉಪ್ಪು – ೧ ಚಮಚ

ಮಾಡುವ ವಿಧಾನ :

ಬೌಲಿಗೆ ಚಿಕನ್ ಕೈಮಾ, ಈರುಳ್ಳಿ, ಕಸಿರು ಮೆಣಸಿನಕಾಯಿ, ಹೂಕೋಸ್, ಕಾರ್ನ್‌ಫ್ಲೋರ್, ಮೈದಾ ಹಿಟು, ಮೊಟ್ಟೆ, ಚಿಲ್ಲಿ ಸಾಸ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಚಿನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಉಂಡೆಯಂತೆ ಮಾಡಿ, ಕಾದಿರುವ ಎಣ್ಣೆಯಲ್ಲಿ ಕರಿಯಿರಿ. ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ದಪ್ಪ ಮೆಣಸಿನಕಾಯಿ, ಈರುಳ್ಳಿ, ಸೋಯಾಸಾಸ್, ಕಾಳುಮೆಣಸಿನಪುಡಿ ಹಾಕಿ ಬೆರೆಸಿ. ಕರಿದಿಟ್ಟಿರುವ ಉಂಡೆಗಳನ್ನು ಬಾಣಲಿಗೆ ಹಾಕಿ. ಇದಕ್ಕೆ ಕಾರ್ನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿದರೆ, ಚಿಕನ್ ಕೈಮಾ ಗೋಬಿಮಂಚೂರಿ ರೆಡಿ.