ಚಿಕನ್ ಕರ್ರಿ ರೋಸ್ಟ್

ಬೇಕಾಗುವ ಸಾಮಗ್ರಿಗಳು

*ಚಿಕನ್ – ೨೫೦ ಗ್ರಾಂ
*ಮೈದಾ – ೫೦ ಗ್ರಾಂ
*ಕಾರ್ನ್ ಫ್ಲೋರ್ – ೫೦ ಗ್ರಾಂ
*ಕಾಳು ಮೆಣಸಿನಪುಡಿ – ೧ ಚಮಚ
*ಉಪ್ಪು – ೧/೨ ಚಮಚ
*ಎಣ್ಣೆ – ೫೦೦ ಮಿ.ಲೀ
*ರೆಡ್ ಚಿಲ್ಲಿ ಸಾಸ್ – ೧ ಚಮಚ
*ಕರಿಬೇವು – ೨ ಚಮಚ
*ಈರುಳ್ಳಿ – ೨
*ಟೊಮೆಟೊ – ೩
*ದಪ್ಪ ಮೆಣಸಿನಕಾಯಿ – ೧
*ಸೋಯಾಸಾಸ್ – ೧ ಚಮಚ
*ತುಪ್ಪ – ೫ ಚಮಚ

ಮಾಡುವ ವಿಧಾನ :

೧ ಪಾತ್ರೆಗೆ ಚಿಕನ್, ಮೈದಾಹಿಟ್ಟು, ಕಾರ್ನ್‌ಫ್ಲೋರ್, ಕಾಳು ಮೆಣಸಿನ ಪುಡಿ, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ೧ ಕಡಾಯಿಗೆ ತುಪ್ಪ ಹಾಕಿ ಕಾದ ಮೇಲೆ ಅದಕ್ಕೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿ, ಕರಿಬೇವು, ಹಾಕಿ ಹುರಿದು ಟೊಮೆಟೊ ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್ ಹಾಕಿ ಕಲಸಿ ಇದಕ್ಕೆ ಕರಿದ ಚಿಕನ್ ಹಾಕಿ ಮಿಕ್ಸ್ ಮಡಿ ಈಗ ಚಿಕನ್ ಕರ್ರಿ ರೋಸ್ಟ್ ಸವಿಯಲು ಸಿದ್ಧ.