ಚಿಂತಾಮಣಿ ಮಠದ ಘೋಷವಾಕ್ಯ ಅನಾವರಣ

ವಿಜಯನಗರಹೊಸಪೇಟೆ ಆ11: ಸ್ಥಳೀಯ ಅಮರಾವತಿ ಚಿಂತಾಮಣಿ ಮಠದ ಘೋಷ ವಾಕ್ಯವನ್ನು ಹಿರಿಯ ಆಧ್ಯಾತ್ಮಿಕ ಚಿಂತಕ ಪಾವಗಡ ಪ್ರಕಾಶ  ಅನಾವರಣಗೊಳಿಸಿದರು.ಗುರುವಾರ ಹೊಸಪೇಟೆಯ ಚಿಂತಾಮಣಿ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳನ್ನು ಭೇಟಿ ಮಾಡಿ ನೆರದ ಭಕ್ತವೃಂದಕ್ಕೆ ಆಧ್ಯಾತ್ಮೀಕ ಚಿಂತನೆಗಳ ಕುರಿತು ಅವುಗಳ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಆದ್ಯಾತ್ಮೀಕ ಚಿಂತಕರು ಆದ ಪಾವಗಡ ಪ್ರಕಾಶ ಚಿಂತಾಮಠದ ಗುರುಪರಂಪರೆ ಹಾಗೂ ಕಾರ್ಯವೈಖರಿಯ ಕುರಿತು ಶ್ರೀಗಳೇ ರಚಿಸಿದ ಚಿಂತಾಮಣಿ ಮಠದ ಘೋಷ ವಾಕ್ಯವನ್ನು ಅನಾವರ್ಣಗೊಳಿಸಿ ಅದರ ಅರ್ಥ ವಿವರಣೆ ನೀಡಿದರು.ಶ್ರೀಗಳು ಸೇರಿದಂತೆ ವೇದವಾನ್ ಪಾರ್ಥಸಾರಥಿ ಆಚಾರ್ಯ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ, ಎ.ಶೀನಂಭಟ್, ಡಾ.ಹನುಮಂತರಾವ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
One attachment • Scanned by Gmail